ಕರಾವಳಿಯಲ್ಲಿ ಇಂದು ಕೋರೋನಾ 31 ಪಾಸಿಟಿವ್ | ಮುಂಬೈ ಲಿಂಕು…!
ಮಂಗಳೂರು: ಕರಾವಳಿಯಲ್ಲಿ ಕೊರೊನಾ ಆರ್ಭಟ ಹೆಚ್ಚಿದ್ದು, ಅವಿಭಜಿತ ಜಿಲ್ಲೆಯಲ್ಲಿ ಇಂದು 31 ಪ್ರಕರಣ ದೃಢವಾಗಿದ್ದು, ಇದು ಉಭಯ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಅರೋಗ್ಯ ಇಲಾಖೆ ಇಂದು ಮಧ್ಯಾಹ್ನ ಬಿಡುಗಡೆ ಮಾಡಿದ ಬುಲೆಟಿನ್ ಉಡುಪಿ ಜಿಲ್ಲೆಯಲ್ಲಿ 25 ಪ್ರಕರಣ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಪೈಕಿ ದುಬೈ ಹಾಗೂ ಮುಂಬೈಯಿಂದ ಬಂದ ಪ್ರಯಾಣಿಕರಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ರಾಜ್ಯದಲ್ಲಿಯೂ ಕೋರೋನಾ ಅಬ್ಬರ ಭುಗಿಲೆದ್ದಿದೆ. ಇಂದು ಈವರೆಗೆ 116 ಪ್ರಕರಣಗಳು ದಾಖಲಾಗಿವೆ.