ಇಳಂತಿಲ: ಕಸಾಯಿಖಾನೆಗೆ ಪೊಲೀಸ್ ದಾಳಿ | 1 ಕ್ವಿಂಟಾಲ್ ದನದ ಮಾಂಸ ಸಹಿತ ಇಬ್ಬರು ವಶಕ್ಕೆ

ಉಪ್ಪಿನಂಗಡಿ: ಇಳಂತಿಲ ಗ್ರಾಮದ ಅಗರ್ತ ಮಹಮ್ಮದ್ ಅಶ್ರಫ್ ಎಂಬವರ ಮನೆಯ ಕೊಟ್ಟಿಗೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ವಿಕ್ರಯಿಸಲು ಸಿದ್ದವಾಗಿದ್ದ ಒಂದು ಕಿಂಟ್ವಾಲ್ ಗೋಮಾಂಸವನ್ನು ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.

ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದಾಗ ಕಳವುಗೈದು ತಂದ ದನಗಳನ್ನು ಅಕ್ರಮವಾಗಿ ವಧಿಸಿ ಮಾಂಸವನ್ನು ವಿಕ್ರಯಿಸುವ ದಂಧೆ ಪತ್ತೆಯಾಗಿದೆ.

ಆರೋಪಿಗಳಾದ ಮನೆಮಾಲಕ ಮಹಮ್ಮದ್ ಅಶ್ರಫ್ ಮತ್ತು ಸಿಬಾತ್ತುಲ್ಲಾ ಎಂಬವರನ್ನು ದಸ್ತಗಿರಿ ಮಾಡಲಾಗಿ ಕಸಾಯಿಖಾನೆಯಲ್ಲಿದ್ದ ಒಂದು ಕಿಂಟ್ವಾಲ್ ದನದ ಮಾಂಸ, ತೂಕದ ಯಂತ್ರ, ಮತಿತ್ತರ ಸಾಮಾಗ್ರಿಗಳನ್ನು ವಶಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕಾರ್ಯಾಚರಣೆಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಈರಯ್ಯ ಡಿ ಎನ್, ಮತ್ತು ಇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Leave A Reply

Your email address will not be published.