ಈಶ್ವರಮಂಗಲ | ವಾದ ಪ್ರತಿವಾದ ಮಾಡುವ ವಕೀಲ ವಿದ್ಯಾರ್ಥಿ ಇದೀಗ ಮೀನು ವ್ಯಾಪಾರದಲ್ಲಿ

ಪುತ್ತೂರು ತಾಲೂಕಿನ ಈಶ್ವರಮಂಗಲದ ಸ್ಥಳೀಯ ಯುವಕ ಚಂದ್ರಹಾಸ ಎಂಬವರು ಈಶ್ವರಮಂಗಲ ಪೇಟೆಯಲ್ಲಿ ಹೊಸತಾಗಿ ಮೀನಿನ ವ್ಯಾಪಾರ ಪ್ರಾರಂಭಿಸಿದ್ದಾರೆ.

ವಕೀಲ ವೃತ್ತಿ ಮಾಡುವ ಹಂಬಲವಿರುವ ಈ ಯುವಕ ಈಗ LLB ಓದುತ್ತಿದ್ದು, ತನ್ನ ಬಿಡುವಿನ ಸಹಾಯದಲ್ಲಿ ತನ್ನ ಸಹೋದರ ಮತ್ತು ಇತರ ಗೆಳೆಯರ ಸಹಕಾರದಿಂದ ಮತ್ಸ್ಯೋದ್ಯಮಕ್ಕೆ ಇಳಿದಿದ್ದಾರೆ.

ಇವರು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಾಗಿದ್ದು ಇದೀಗ ಹೊಸ ಹುರುಪಿನೊಂದಿಗೆ ಈ ವ್ಯಾಪಾರವನ್ನು ಪ್ರಾರಂಭಿಸಿದ್ದಾರೆ. ಮೀನು ವ್ಯಾಪಾರ ಬಹಳ ಲಾಭದಾಯಕ ಉದ್ಯಮವಾಗಿರುವುದೂ ಇವರು ಈ ಕಾರ್ಯಕ್ಕೆ ಇಳಿಯಲು ಒಂದು ಕಾರಣ.

ಆದರೆ ಇವರು ಮೀನು ಮಾರಾಟಕ್ಕೆ ಇಳಿಯಲು ಮುಖ್ಯ ಕಾರಣ ಏನೆಂದರೆ, ಗ್ರಾಹಕರಿಗೆ ಅತ್ಯಂತ ತಾಜಾ ಮೀನುಗಳನ್ನು ಆದಷ್ಟು ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ದೊರಕಿಸಿ ಕೊಡುವ ಉದ್ದೇಶದಿಂದ. ಮೀನು ಅತ್ಯಂತ ಪೌಷ್ಟಿಕ ಆಹಾರವಾಗಿದ್ದು, ಹಳೆಯ, ತಾಜಾ ಅಲ್ಲದ ಮೀನುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಹಾಳು. ಗ್ರಾಹಕರಿಗೆ ಫ್ರೆಷ್ ಮೀನು ಮಾರಾಟ ಮಾಡುವ ಉದ್ದೇಶವಿಟ್ಟುಕೊಂಡು ಪ್ರಾರಂಭಿಸಿದ ವ್ಯಾಪಾರಕ್ಕೆ ಗ್ರಾಹಕರು ಸಂಪೂರ್ಣ ಸಹಕಾರ ನೀಡಬೇಕೆಂದು ಅವರು ಕೇಳಿಕೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡದ ಹಲವೆಡೆ ಹಿಂದೂ ಯುವಕರು ಮೀನು ಮಾರಾಟಕ್ಕೆ ಕೈ ಹಾಕಿದ್ದು, ಅದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಟ್ರೊಲ್ ಆಗುತ್ತಿದೆ. ಪರ ವಿರೋಧದ ಚರ್ಚೆ ಶುರುವಾಗಿದೆ.

Leave A Reply

Your email address will not be published.