ಮಾಡಾವು 110 ಕೆ.ವಿ ವಿದ್ಯುತ್ ಕೇಂದ್ರ ಲೋಕಾರ್ಪಣೆ | ಈಡೇರಿತು ದಶಕಗಳ ಕನಸು
ಪುತ್ತೂರು: ಬಹುನಿರೀಕ್ಷಿತ ಮಾಡಾವು 110 ಕೆ.ವಿ. ವಿದ್ಯುತ್ ಉಪಕೇಂದ್ರವು ಲೋಕಾರ್ಪಣೆಗೊಂಡಿದೆ.
ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್,ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು,ಕೆಯ್ಯೂರು ಗ್ರಾ.ಪಂ.ಅಧ್ಯಕ್ಷ ಬಾಬು ಬಿ ಹಾಗೂ ಸದಸ್ಯರು ಹಾಗೂ ಕೆಪಿಟಿಸಿಎಲ್,ಮೆಸ್ಕಾಂ ಅಧಿಕಾರಿಗಳು, ಸಿಬಂದಿಗಳು ಉಪಸ್ಥಿತರಿದ್ದರು.
ವಿದ್ಯುತ್ ಬಳಕೆದಾರರ ವೇದಿಕೆಯ ಅಧ್ಯಕ್ಷ ಜಯಪ್ರಸಾದ್ ಜೋಷಿ ಸ್ವಾಗತಿಸಿ, ವಂದಿಸಿದರು.
ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕುಗಳ ವ್ಯಾಪ್ತಿಯಲ್ಲಿ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಈ ಉಪಕೇಂದ್ರ ಸಹಕಾರಿಯಾಗಲಿದೆ. ಹಲವು ಅಡ್ಡಿ ಅಂತಕಗಳನ್ನು ಎದುರಿಸಿದ್ದ ಈ ಯೋಜನೆಯೂ ಪೂರ್ಣಗೊಂಡಿದೆ.ಕೆಲ ದಿನಗಳ ಹಿಂದೆ ಸುಳ್ಯ ಶಾಸಕ ಎಸ್.ಅಂಗಾರ ಪ್ರಾಯೋಗಿಕ ಚಾಲನೆ ನೀಡಿದ್ದರು.
ಒಟ್ಟು ವೆಚ್ಚ
ಮಾಡಾವು 110 ಕೆ.ವಿ ವಿದ್ಯುತ ಉಪಕೇಂದ್ರದ ನಿರ್ಮಾಣಕ್ಕೆ ರೂ. 15 ಕೋಟಿ ವೆಚ್ಚವಾಗಿದ್ದು, ಲೈನ್ ಕಾಮಗಾರಿಗಳಿಗಾಗಿ ರೂ. 18 ಕೋಟಿ ವೆಚ್ಚವಾಗಿದೆ. ಒಟ್ಟು ರೂ.23 ಕೋಟಿ ವೆಚ್ಚದ ಈ ಉಪಕೇಂದ್ರವನ್ನು ಕೆಪಿಟಿಸಿಎಲ್ ವತಿಯಿಂದ ನಿರ್ಮಾಣಗೊಳಿಸಲಾಗಿದೆ.