ಭಾರತವನ್ನು ಕೆಣಕಿದರೆ ಗನ್ ಹಿಡಿಯಲು ಸಿದ್ಧ | ಅಫ್ರೀದಿ ವಿರುದ್ಧ ಕಿಡಿಕಾರಿದ ಭಜ್ಜಿ

ಕಳೆದ 6-7 ವರ್ಷಗಳಲ್ಲಿ ಭಾರತ ಇಡಿಯ ವಿಶ್ವಕ್ಕೇ ಮಾದರಿಯಾಗಿ ಎಲ್ಲ ಕ್ಷೇತ್ರಗಳಲ್ಲಿ ನಿಲ್ಲ ತೊಡಗಿದೆ ಮತ್ತು ನಿಂತಿದೆ.
ಭಾರತದಲ್ಲಿ ತೆಗೆದುಕೊಳ್ಳುವ ಅದೆಷ್ಟು ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತದೆ.
ನರೇಂದ್ರ ಮೋದಿ ಅವರ ಅವಧಿಯಲ್ಲಿ ಭಾರತ ಇನ್ನೂ ಮುಂದುವರೆದಿದ್ದು , ವಿಶ್ವ ಗುರು ಆಗಲು ಹವಣಿಸುತ್ತಿದೆ.

ಪ್ರಸ್ತುತ ದಿನಗಳಲ್ಲಿ ಕೊರೋನ ಎಂಬ ಹೆಮ್ಮಾರಿ ಇಡಿಯ ವಿಶ್ವವನ್ನೇ ದುಃಖದ ಕಡಲಿಗೆ ಅಲ್ಲಿರುವ ಈ ಸಂದರ್ಭದಲ್ಲಿ ಸಹ ತನ್ನ ಕೆಲವು ಐತಿಹಾಸಿಕ ನಿರ್ಧಾರಗಳ ಮೂಲಕವೇ ದೇಶದ ಜನರ ಆರೋಗ್ಯ ರಕ್ಷಣೆ ಮಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಪಾಕ್ ಆಟಗಾರ ಆಫ್ರಿದಿ ಅವಹೇಳನಕಾರಿ ಹೇಳಿಕೆ ನೀಡಿದ್ದರು .

ಇವರ ಹೇಳಿಕೆಗೆ ಭಾರತದ ಸ್ಪಿನ್ ದಿಗ್ಗಜ ಎಂದೇ ಕರೆಯಲ್ಪಡುವ ಹರ್ಭಜನ್ ಸಿಂಗ್ ಪ್ರತ್ಯುತ್ತರ ನೀಡಿದ್ದು “ಬಾಲ್ ಹಿಡಿದ ಕೈಗಳು ಅಗತ್ಯ ಬಿದ್ದರೆ ಗನ್ ಹಿಡಿಯುವುದಕ್ಕೂ ಹಿಂಜರಿಯುವುದಿಲ್ಲ” ಎಂದು ಹೇಳಿ ಆಫ್ರಿದಿ ತನ್ನನ್ನು ತಾನೇ ಮುಟ್ಟಿಕೊಳ್ಳುವಂತೆ ಮಾಡಿದ್ದಾರೆ.
ನಮ್ಮ ದೇಶ ಹಾಗೂ ಪ್ರಧಾನಿ ಮೋದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಅಫ್ರಿದಿ ವಿರುದ್ಧ ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ. ಆತ ನನ್ನ ಸ್ನೇಹಿತ ಎಂದು ನಾನು ಭಾವಿಸಿದ್ದಕ್ಕಾಗಿ ನನಗೆ ಬೇಸರವಾಗುತ್ತದೆ. ನನ್ನ ಸ್ನೇಹಿತ ಎಂದು ಹೇಳಿಕೊಳ್ಳುವಂತಹ ಯೋಗ್ಯ ಮನುಷ್ಯನಲ್ಲ. ಇನ್ನು ಮುಂದೆ ಆತನೊಂದಿಗಿನ ಸ್ನೇಹವನ್ನು ಕೊನೆಗೊಳಿಸುತ್ತೇನೆ ಎಂದು ಹರ್ಭಜನ್​ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇಂದಾಗಲಿ ನಾಳೆಯಾಗಲಿ ನನ್ನ ದೇಶಕ್ಕೆ ನನ್ನ ಸೇವೆಯ ಅಗತ್ಯವಿದ್ದರೆ ಮುಂದೆ ನಿಲ್ಲುತ್ತೇನೆ. ಗಡಿಯಲ್ಲಿ ನಿಂತು ಹೋರಾಡುತ್ತೇನೆ ಕೂಡ. ನನ್ನ ದೇಶಕ್ಕಾಗಿ ಗನ್‌ ಹಿಡಿಯಲು ಮೊದಲಿಗನಾಗಿರುತ್ತೇನೆ ಎಂದು ಹರ್ಭಜನ್‌ ಹೇಳಿದ್ದಾರೆ.

ಸಂದೀಪ್. ಎಸ್ ಮಂಚಿಕಟ್ಟೆ

Leave A Reply

Your email address will not be published.