ಜೂನ್ 25 ರಿಂದ ಜುಲೈ 5 ರ ವರೆಗೆ SSLC ಪರೀಕ್ಷೆ, ಜೂನ್ 18 ರಂದು ದ್ವಿತೀಯ PUC ಇಂಗ್ಲಿಷ್ ಪರೀಕ್ಷೆ

Share the Article

ಕರ್ನಾಟಕ ರಾಜ್ಯ SSLC ಪರೀಕ್ಷಾ ದಿನಾಂಕ ಪ್ರಕಟವಾಗಿದೆ. ಜೂನ್ 25 ರಿಂದ ಜುಲೈ 5ರ ವರೆಗೆ SSLC ಪರೀಕ್ಷೆ.
ಒಟ್ಟು 10 ದಿನಗಳ ಕಾಲ ಪರೀಕ್ಷೆ ನಡೆಯಲಿಿದೆ.

ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ಪರೀಕ್ಷೆಗೆ ತಲಾ ಒಂದೊಂದು ದಿನ ಅಂತರವಿರುತ್ತದೆ.

ಜೂನ್ 18 ರಂದು ದ್ವಿತೀಯ PUC ಒಂದು ವಿಷಯದ ಪರೀಕ್ಷೆ ನಡೆಯಲಿದೆ.

ಪರೀಕ್ಷೆ ಬರೆಯುವ ಎಲ್ಲಾ ವಿಧ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯ. ಎಲ್ಲಾ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ಯಾನರ್ ಅಳವಡಿಕೆ ಇರಬೇಕು ಮತ್ತು ಯಾವುದಾದರೂ ವಿಧ್ಯಾರ್ಥಿಗಳಿಗೆ ಆರೋಗ್ಯದ ಸಮಸ್ಯೆ ಇದ್ದರೆ, ಅಂತಹವರಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯುವ ವ್ಯವಸ್ಥೆ.
ಪರೀಕ್ಷೆ ಆರಂಭಕ್ಕೆ ಮುನ್ನ ಪರೀಕ್ಷಾ ಕೇಂದ್ರದ ಸ್ಯಾನಿಟೈಸ್.
ವಲಸೆ ಕಾರ್ಮಿಕರ, ಹಾಸ್ಟೆಲ್ ವಿದ್ಯಾರ್ಥಿಗಳ ಮಕ್ಕಳಿಗೆ ಪರೀಕ್ಷೆ ಬರೆಯಲಿ ಪರೀಕ್ಷಾ ಕೇಂದ್ರದ ಬದಲಾವಣೆಗೆ ಅವಕಾಶ ಮಾಡಿ ಕೊಡಲಾಗಿದೆ.
ಡಿಡಿ ಚಂದನದಲ್ಲಿ ಮಾದರಿ ಪ್ರಶ್ನೆ ಪ್ರತ್ರಿಕೆಗೆ ಉತ್ತರ ನೀಡುವ ವಿಶೇಷ ಕಾರ್ಯಕ್ರಮ

ರಾಜ್ಯ ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು.

Leave A Reply

Your email address will not be published.