ದಕ್ಷಿಣ ಕನ್ನಡ ನಿಯಂತ್ರಣಕ್ಕೆ ಬಾರದ ಕಿಲ್ಲರ್ | ಮೇ 18 ರಂದು ಮತ್ತೆ 2 ಪಾಸಿಟಿವ್, ಉಡುಪಿಯಲ್ಲಿ 1 ಪ್ರಕರಣ ಪತ್ತೆ
ದಕ್ಷಿಣ ಕನ್ನಡದಲ್ಲಿ ನಿಯಂತ್ರಣಕ್ಕೆ ಬಾರದ ಕಿಲ್ಲರ್ ಕೋರೋನಾ. ಹಿಂದೆ ವಾರಕ್ಕೊಂದು ಎರಡು ದಾಖಲಾಗುತ್ತಿದ್ದ ಪ್ರಕರಣಗಳು, ಈಗ ದಿನಕ್ಕೆರಡು ಆಗುವಷ್ಟು ಗಂಭೀರ ರೂಪ ತಾಳಿದೆ.
ಇಂದು, ಮೇ 18 ರಂದು ಮತ್ತೆ 2 ಕೊರೊನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಮುಂಬೈನಿಂದ ಬಂದಿದ್ದ ಬಂಟ್ವಾಳದ ಕರೋಪಾಡಿಯ 30 ವರ್ಷದ ಯುವಕ ಹಾಗೂ 55 ವರ್ಷದ ಮಹಿಳೆನಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
55 ವರ್ಷದ ಮಹಿಳೆಗೆ ಹೇಗೆ ಸೋಂಕು ಹಬ್ಬಿದೆ ಎನ್ನುವುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಅದರ ಸೋಂಕಿನ ಮೂಲದ ಬಗ್ಗೆ ತನಿಖೆ ಸಾಗಿದೆ.
ಇವತ್ತು ಉಡುಪಿಯಲ್ಲಿ ಕೂಡಾ ಒಂದು ಪ್ರಕರಣ ದಾಖಲಾಗಿದೆ.
ದ. ಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 54 ಕ್ಕೆ ಏರಿಕೆಯಾಗಿದೆ. ಒಟ್ಟು 5 ಜನ ಸೋಂಕಿತರು ಮೃತಪಟ್ಟಿರುತ್ತಾರೆ. ಒಟ್ಟು 16 ಜನ ಗುಣಮುಖರಾಗಿದ್ದಾರೆ. ಒಟ್ಟು ಆಕ್ಟೀವ್ ಕೇಸುಗಳ ಸಂಖ್ಯೆ, ಇವತ್ತಿನದೂ ಸೇರಿ 33.
ಇವತ್ತು ರಾಜ್ಯದಲ್ಲಿ ದಾಖಲೆಯ 99 ಕೇಸುಗಳು ಒಂದೇ ದಿನ ದಾಖಲಾಗಿದೆ.