ವಿಟ್ಲ ಮೂಲದ ವ್ಯಕ್ತಿ ಕುವೈಟ್‌ನಲ್ಲಿ ಕೊರೋನಾಗೆ ಬಲಿ

Share the Article

ಮಂಗಳೂರು : ವಿಟ್ಲ ಕಾಶಿಮಠ ಮೂಲದ ವ್ಯಕ್ತಿಯೋರ್ವರು ಕುವೈಟ್‌ನಲ್ಲಿ ಮೇ ೧೭ರಂದು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಹಲವು ವರ್ಷಗಳಿಂದ ಕುವೈಟ್‌ನಲ್ಲಿ ಉದ್ಯೋಗದಲ್ಲಿದ್ದ ಅವರು ಕಳೆದ ಒಂದು ತಿಂಗನಿಂದ ತುಸು ಅಸ್ವಸ್ಥಗೊಂಡಿದ್ದರು.

ಕೋವಿಡ್ 19 ಪರೀಕ್ಷೆಯಲ್ಲಿ ಅವರಿಗೆ ಕೊರೋನಾ ಸೋಂಕು ದೃಢಗೊಂಡ ಬಳಿಕ ಕಳೆದೊಂದು ವಾರದಿಂದ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ.

ವರ್ಷದ ಹಿಂದೆ ಊರಿಗೆ ಬಂದು ಮಗಳ ಮದುವೆ ಕಾರ್ಯವನ್ನು ನೆರವೇರಿಸಿ ಬಳಿಕ ಕುವೈಟ್‌ಗೆ ಹಿಂತಿರುಗಿದ್ದರು.

ಮೃತರು ಪತ್ನಿ, ಮಗ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆಯನ್ನು ಕುವೈಟ್‌ನಲ್ಲಿಯೇ ನಡೆಸಲಾಗಿದ್ದು ಚರ್ಚ್‌ನ ಧರ್ಮಗುರುಗಳ ನೇತೃತ್ವದಲ್ಲಿ ಈ ಸಂಬಂಧ ಪ್ರಾರ್ಥನಾ ವಿಧಿ ವಿಧಾನಗಳನ್ನು ಮೃತರ ಮನೆಯಲ್ಲಿ ನೆರವೇರಿಸಲಾಗಿದೆ.ಸಂಬಂಧಿಕರು, ಬಂಧು ಬಳಗದವರು ಆಗಮಿಸಿದ್ದರು ಎಂದು ತಿಳಿದು ಬಂದಿದೆ.

Leave A Reply