ರಾಜ್ಯ ಸರಕಾರಗಳು ಕಾರ್ಮಿಕ ಹಿತ ರಕ್ಷಣಾ ಕಾನೂನನ್ನು ರದ್ದು ಗೊಳಿಸಿದ್ದನ್ನು ಪ್ರತಿಭಟಿಸಿ ಮೇ 22 ರಂದು ಕಾರ್ಮಿಕ ಸಂಘಗಳ ದೇಶವ್ಯಾಪಿ ಮುಷ್ಕರ
ನವದೆಹಲಿ: ಅನೇಕ ರಾಜ್ಯ ಸರ್ಕಾರಗಳು ಕಾರ್ಮಿಕ ಹಿತ ರಕ್ಷಣೆ ಕಾನೂನುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿವೆ. ಇದನ್ನು ವಿರೋಧಿಸಿ ಮೇ 22 ರಂದು ಕೇಂದ್ರೀಯ ಕಾರ್ಮಿಕ ಸಂಘಗಳ(ಸಿಟಿಯು) ವತಿಯಿಂದ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಈವರೆಗೆ 10 ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ. ಲಾಕ್ಡೌನ್ ಜಾರಿಯಾಗಿರುವುದರಿಂದ ದೇಶದಲ್ಲಿ ಕಾರ್ಮಿಕರ ಸ್ಥಿತಿ ಸಂಕಷ್ಟದಲ್ಲಿದೆ. ಕೆಲಸವಿಲ್ಲದೆ ದುಡಿಯುವ ವರ್ಗ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು ಇಂತಹ ಸಂದರ್ಭದಲ್ಲಿ ಕಾರ್ಮಿಕ ಹಿತರಕ್ಷಣೆಯ ಕಾನೂನುಗಳನ್ನು ಮೊಟಕುಗೊಳಿಸಲಾಗುತ್ತಿದೆ.
ಕಾರ್ಮಿಕ ಹಿತರಕ್ಷಣೆ ಕಾನೂನು ಕೈಬಿಟ್ಟಿದ್ದ ಉತ್ತರ ಪ್ರದೇಶದ ಯೋಗಿ ನೇತೃತ್ವದ ಸರ್ಕಾರ ಕಾರ್ಮಿಕ ಸಂಘಟನೆಗಳ ಒತ್ತಡಕ್ಕೆ ಮಣಿದು ಆ ಆದೇಶವನ್ನು ಹಿಂಪಡೆಯಿತು.ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕೆಲಸದ ಅವಧಿಯನ್ನು 8ರಿಂದ 12 ಗಂಟೆಗೆ ಹೆಚ್ಚಳ ಮಾಡಲಾಗಿತ್ತು. ರಾಜ್ಯ ಸರ್ಕಾರದ ಈ ತೀರ್ಮಾನಕ್ಕೆ ತೀವ್ರ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆದೇಶವನ್ನು ಹಿಂಪಡೆಯಲಾಯಿತು ಎನ್ನಲಾಗಿದೆ.