ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಡಿ.ಡಿ ವಿತರಣೆ

ಪಜಿರಡ್ಕ, ಮೇ, 17 :
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಶ್ರೀ ಸದಾಶಿವೇಶ್ವರ ದೇವಸ್ಥಾನ ಪಜಿರಡ್ಕ ಇದರ ಅಭಿವೃದ್ಧಿ ಕಾಮಗಾರಿಗೆ ಮಂಜೂರಾದ ₹50000/(ಐವತ್ತು ಸಾವಿರದ) ಡಿ.ಡಿಯನ್ನು ಇಂದು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಯೋಜನೆಯ ಪ್ರತಿನಿಧಿಗಳಾದ ಪ್ರಶಾಂತ್, ಸುಧಾ ಹಾಳೆದಡಿ, ಸುಂದರ ಗೌಡ ಬಜಿಲ, ಸ್ವಸ್ತಿಕ್ ಕನ್ಯಾಡಿ ಉಪಸ್ಥಿತರಿದ್ದರು. ದೇವಸ್ಥಾನದ ಪರವಾಗಿ ಆಡಳಿತ ಮಂಡಳಿಯ ಅಧ್ಯಕ್ಷ ತುಕಾರಾಮ್ ಸಾಲ್ಯಾನ್ ಆರ್ಲ, ದೇವಸ್ಥಾನದ ಅರ್ಚಕರು ಡಿ.ಡಿ ಸ್ವೀಕರಿಸಿದರು.

ವರದಿ : ಸ್ವಸ್ತಿಕ್ ಕನ್ಯಾಡಿ

Leave A Reply

Your email address will not be published.