ಸವಣೂರಿನಿಂದ 34 ವಲಸೆ ಕಾರ್ಮಿಕರು ಉತ್ತರಪ್ರದೇಶಕ್ಕೆ ..

ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದ 34 ವಲಸೆ ಕಾರ್ಮಿಕರು ಇಂದು ಉತ್ತರಪ್ರದೇಶಕ್ಕೆ ಪ್ರಯಾಣಿಸಿದರು.

ಈ ಬಗ್ಗೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮಾಡಿದ ಬೆಳ್ಳಾರೆ ಪೋಲಿಸ್ ಠಾಣಾಧಿಕಾರಿ ಮತ್ತು ಸವಣೂರು ಗ್ರಾಮ ಪಂಚಾಯತಿಗೆ ಸಾರ್ವಜನಿಕ ವಲಯದಿಂದ ಅಭಿನಂದನೆಯ ಮಹಾಪೂರ ಬಂದಿದೆ.


ಲಾಕ್ಡೌನ್ ನಿಂದಾಗಿ ಊರಿಗೆ ತೆರಳಲಾಗದೆ ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಕಷ್ಟಕ್ಕೆಸಿಲುಕಿದ್ದ ಉತ್ತರಪ್ರದೇಶ ಮೂಲದ 34 ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸುವುದಕ್ಕೆ ಅತ್ಯಂತ ಸಮರ್ಥವಾಗಿ ಕೆಲಸ ಮಾಡಿದ ಸವಣೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಬಟ್ಟೋಡಿ ಸಿಬ್ಬಂದಿ ವರ್ಗ, ಆಡಳಿತ ಮಂಡಳಿ , ಕಂದಾಯ ಇಲಾಖೆ ಅಧಿಕಾರಿಗಳಿಗೆ ಅಭಿಿನಂದನೆ ವ್ಯಕ್ತವಾಗಿದೆ.


ಬೆಳ್ಳಾರೆ ಪೋಲಿಸ್ ಠಾಣೆಯ ಠಾಣಾಧಿಕಾರಿ ಶ್ರೀ ಆಂಜನೇಯ ರೆಡ್ಡಿ ಯವರು ಮತ್ತು ಠಾಣೆಯ ಸಿಬ್ಬಂದಿಗಳು, ಈ ವಲಸೆ ಕಾರ್ಮಿಕರಿಗೆ ಊರಿಗೆ ತೆರಳಲು ಬಹಳಷ್ಟು ಮುತುವರ್ಜಿಯಿಂದ ಕಾರ್ಯಮಾಡಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿರುವುದು ಅತ್ಯಂತ ಪ್ರಶಂಸನೀಯ.


ಠಾಣಾಧಿಕಾರಿ ಶ್ರೀ ಆಂಜನೇಯ ರೆಡ್ಡಿಯವರು ಕಾರ್ಮಿಕರು ಕೆಲಸ ಮಾಡುತ್ತಿದ್ದ ಸ್ಥಳಗಳಿಗೆ ತೆರಳಿ ಅವರಿಗೆ ಸ್ಥೈರ್ಯ ತುಂಬಿ ಅವರನ್ನು ಅವರಶರ ಊರಿಗೆ ಕಳುಹಿಸುವ ಬಗ್ಗೆ ಭರವಸೆ ನೀಡಿ ಕಾರ್ಮಿಕರು ವಿಚಲಿತರಾಗದಂತೆ ಮುಂಜಾಗುರೂಕತೆ ವಹಿಸಿದ್ದರು.

ಇತರ ಇಲಾಖೆಯ ಅಧಿಕಾರಿಗಳೊಡನೆ, ಸವಣೂರು ಗ್ರಾಮ ಪಂಚಾಯತ್ ನೊಡನೆ ಸಮನ್ವಯತೆಯ ಕಾರ್ಯ ಮಾಡಿ ಈ ದಿನ (ಮೇ 17) 34 ಕಾರ್ಮಿಕರು ಉತ್ತರಪ್ರದೇಶಕ್ಕೆ ತೆರಳುವಂತೆ ಮಾಡಿದ್ದಾರೆ, ಇಂದು ಬೆಳಗ್ಗೆ 6 ಗಂಟೆಗೆ ಸವಣೂರು ನಿಂದ ಪುತ್ತೂರು ರೈಲ್ವೆ ನಿಲ್ದಾಣಕ್ಕೆ ತೆರಳಲು ಬಸ್ ವ್ಯವಸ್ಥೆಯನ್ನು ಮಾಡಿ , ಸ್ವತಃ ಬೆಳ್ಳಂಬೆಳಗೆ ತಾನೆ ಹಾಜರಿದ್ದು ಕಾರ್ಮಿಕರನ್ನು ಮಾತನಾಡಿಸಿ ಅವರಿಗೆ ಸೂಕ್ತ ಸೂಚನೆ, ಮಾರ್ಗದರ್ಶನ ನೀಡಿ ಪ್ರಯಾಣಕ್ಕೆ ಶುಭಹಾರೈಸಿ ಬೀಳ್ಕೋಟ್ಟರು . ಅತ್ಯಂತ ಆಸಕ್ತಿಯಿಂದ ಮಾನವೀಯ ನೆಲೆಯಲ್ಲಿ ಕಾರ್ಯ ಮಾಡಿದ ಬೆಳ್ಳಾರೆ ಪೋಲಿಸ್ ಠಾಣಾಧಿಕಾರಿಯವರ ಹಾಗೂ ಸಿಬ್ಬಂದಿಗಳ ನಡೆ ಆಭಿನಂದನೀಯ ಮತ್ತು ಪ್ರಶಂಸೆಗೆ ಪಾತ್ರವಾಗಿದೆ.

Leave A Reply

Your email address will not be published.