ಟ್ಯಾಕ್ಸಿಗಳಲ್ಲಿ ಕೊರೋನಾ ಹರಡುವಿಕೆ ತಡೆಯಲು ಇಲ್ಲಿದೆ ಉಪಾಯ…!
ಕೊಚ್ಚಿ: ಮಹಾಮಾರಿ ಕೊರೋನಾ ವೈರಸ್ ಹರಡುವುದನ್ನ ತಡೆಯಲು ಕೇರಳದಲ್ಲಿ ಖಾಸಗಿ ಟ್ಯಾಕ್ಸಿ ಸಂಸ್ಥೆಯೊಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಇದರಲ್ಲಿ ಟ್ಯಾಕ್ಸಿ ಚಾಲಕ ಮತ್ತು ಪ್ರಯಾಣಿಕರ ಸೀಟುಗಳನ್ನ ಪಾರದರ್ಶಕ ವಸ್ತುವಿನ ಮೂಲಕ ಬೇರ್ಪಡಿಸಲಾಗಿದೆ. ಈ ಮೂಲಕ ಪ್ರಯಾಣಿಕರಿಂದ ಚಾಲಕನಿಗೆ ಅಥವಾ ಚಾಲಕನಿಂದ ಪ್ರಯಾಣಿಕರಿಗೆ ಸೋಂಕು ಹರಡುವ ಸಾಧ್ಯತೆ ತೀರ ಕಡಿಮೆ ಎಂದು ನಂಬಲಾಗಿದೆ.
ವಿದೇಶದಲ್ಲಿ ಸಿಲುಕಿರುವ ಭಾರತೀಯರು ವಿಮಾನ ಮತ್ತು ಹಡಗುಗಳಲ್ಲಿ ಕೊಚ್ಚಿಗೆ ಆಗಮಿಸುತ್ತಿದ್ದಾರೆ. ಅವರನ್ನು ಕರೆದುಕೊಂಡು ಹೋಗಲು ಈ ಟ್ಯಾಕ್ಸಿಗಳನ್ನ ನಿಯೋಜಿಸಲಾಗಿದೆ.
ಆದ್ರೆ ಇದು ಕೇರಳಕ್ಕೆ ಮಾತ್ರ ಸೀಮಿತವಾಗದೆ ದೇಶದ ಉಳಿದ ಭಾಗಕ್ಕೂ ಮಾದರಿಯಾಗಿದೆ.
ದೇಶದಲ್ಲಿ ಕೆಲವೊಂದು ನಿರ್ಬಂಧಗಳೊಂದಿಗೆ ಟ್ಯಾಕ್ಸಿಗಳ ಸಂಚಾರ ಆರಂಭವಾಗಿದೆ. ಹೀಗಾಗಿ ರಸ್ತೆಗೆ ಇಳಿಯೋ ಟ್ಯಾಕ್ಸಿಗಳು ಇಂತಹ ಸುರಕ್ಷತಾ ಕ್ರಮಗಳನ್ನ ಕೈಗೊಂಡರೆ ಕೊರೋನಾವನ್ನು ಸೋಲಿಸಬಹುದು.