ಕರ್ನಾಟಕ 500 ಕೋಟಿ ಆರ್ಥಿಕ ಪ್ಯಾಕೆಜ್ | ಆಶಾಕಾರ್ಯಕರ್ತೆಯರಿಗೆ ತಲಾ 3000 ಸಹಾಯ ಧನ -ಬಿಎಸ್‌ವೈ

ಬೆಂಗಳೂರು: ಇಂದು ಸಿಎಂ ಯಡಿಯೂರಪ್ಪ ಆರ್ಥಿಕ ಪ್ಯಾಕೇಜ್ ನಲ್ಲಿ 500 ಕೋಟಿ ಘೋಷಣೆ ಮಾಡಿದ್ದಾರೆ. ಆಪೇಕ್ಷೆಯಂತೆ ಕೋವಿಡ್-19 ವಿಚಾರದಲ್ಲಿ ಹಗಲು ರಾತ್ರಿ ದುಡಿಯುತ್ತಿರುವ ಆಶಾಕಾರ್ಯಕರ್ತೆಯರಿಗೆ 12.5 ಕೋಟಿ ಸಹಾಯ ಧನ ನೀಡಲಾಗುತ್ತಿದೆ. ರಾಜ್ಯದಲ್ಲಿ 40520 ಜನ ಆಶಾಕಾರ್ಯಕರ್ತೆಯರಿಗೆ ಸಹಕಾರಿ ಇಲಾಖೆಯಿಂದ ತಲಾ 3000 ಸಹಾಯ ಧನ ನೀಡಲಾಗಿದೆ.

ಮೆಕ್ಕೆ ಜೋಳ ಬೆಳೆದ ಪ್ರತೀಯೊಬ್ಬ ರೈತರಿಗೆ 5000 ನೆರವು ನೀಡುವುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಲಾಕ್ ಡೌನ್ ನಿಂದಾಗಿ ಮೆಕ್ಕಾಜೋಳ ಬೆಳೆದ ರೈತರು ತೀವ್ರ ಸಂಕಷ್ಟದಲ್ಲಿದ್ದರು. ಬೆಳೆದ ಬೆಂಬಲ ಬೆಲೆ ಸಿಗುವುದಿರಲಿ ಮಾರುಕಟ್ಟೆ ವರೆಗೂ ಸಾಗಿಸಲು ಸಾಧ್ಯವಾಗದೇ ಲಕ್ಷಾಂತರ ರೂಪಾಯಿ ರೈತರಿಗೆ ನಷ್ಟವಾಗಿದೆ.

ಮೆಕ್ಕೆಜೋಳ ಬೆಳೆದ ರೈತರಿಗೆ, ಆಶಾ ಕಾರ್ಯಕರ್ತೆಯರಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಮೆಕ್ಕೆಜೋಳ ರೈತರಿದ್ದಾರೆ. ಇವರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ ಸರ್ಕಾರವೇ ಖರೀದಿಸಲು ಮುಂದಾಗಿದೆ. ಮೆಕ್ಕೆಜೋಳ ಬೆಳೆಗಾರರಿಗೆ ತಲಾ 5 ಸಾವಿರ ರೂ ನೀಡಲಾಗುವುದು ಎಂದು ಘೋಷಿಸಿದರು.

ಈ ಹಿಂದೆ ನೈಸರ್ಗಿಕ ವಿಕೋಪ ಮತ್ತು ಅಪಘಾತದಿಂದ ಕುರಿ ಮೇಕೆ ಸತ್ತರೆ ರೈತರಿಗೆ 5,000 ರೂ ಪರಿಹಾರ ನೀಡಲಾಗುತ್ತಿತ್ತು. ಈ ಯೋಜನೆಯನ್ನು ಹಾಗೆ ಮುಂದುವರಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ತಪ್ಪು ಅಭಿಪ್ರಾಯಗಳು ಕೇಳಿ ಬರುತ್ತಿವೆ. ನಾನು ರೈತಪರ ಬಜೆಟ್ ಮಂಡಿಸಿದವನು. ನನ್ನಿಂದ ರೈತರಿಗೆ ಅನ್ಯಾಯ ಆಗಲ್ಲ. ಶಿಕಾರಿಪುರದಲ್ಲಿ 45 ವರ್ಷಗಳ ಹಿಂದೆ ಎಪಿಎಂಸಿ ಮುಂದೆ ರೈತರು ಬೆಳೆದ ಬೆಳೆಗೆ ನಾನು ಹೋರಾಟ ಮಾಡಿದ್ದೆ. ರೈತ ತನ್ನ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವ ಅವಕಾಶ ಕಲ್ಪಿಸಿದ್ದೇವೆ. ಈ ಕಾಯ್ದೆಯಿಂದ ಎಪಿಎಂಸಿ ಸಮಿತಿಗಳಿಗೆ ಯಾವುದೇ ದಕ್ಕೆ ಆಗಲ್ಲ ಎಂದು ಭರವಸೆ ನೀಡಿದರು.

ಇನ್ನು ಕೊರೋನಾ ಪರಿಸ್ಥಿತಿಯಲ್ಲಿ ರಾಜ್ಯಾದ್ಯಂತ ಸೇವೆ ಸಲ್ಲಿಸಿರುವ ಆಶಾ ಕಾರ್ಯಕರ್ತೆಯರಿಗೆ 3,000 ಮಾಸಿಕ ಧನ ನೀಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಸುಮಾರು 40,260 ಜನ ಆಶಾ ಕಾರ್ಯಕರ್ತೆಯರಿದ್ದು ಎಲ್ಲರಿಗೂ ಹಣ ತಲುಪಿಸಲಾಗುವುದು. ಇದಕ್ಕೆಂದು 12.5 ಕೋಟಿ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ಇದರ ಬೆನ್ನಲ್ಲೇ ರೈತರ ಸಂಕಷ್ಟಕ್ಕೇ ನೆರವು ಘೋಷಣೆ ಮಾಡಲಾಗಿದೆ. 10 ಲಕ್ಷ ಮೊಕ್ಕೆ ಜೋಳ ಬೆಳೆದ ರೈತರು ನಮ್ಮ ರಾಜ್ಯದಲ್ಲಿದ್ದಾರೆ. ಪ್ರತಿಯೊಬ್ಬ ಮೆಕ್ಕೆಜೋಳ ಬೆಳೆದ ರೈತರಿಗೆ ತಲಾ 5000 ನೆರವು ಘೋಷಣೆ ಮಾಡಿದೆ.

Leave A Reply

Your email address will not be published.