ಗೂನಡ್ಕ ಭೀಕರ ಗಾಳಿಗೆ ನಾಶಗೊಂಡ ಟ್ಯಾಂಕ್| ಅಲ್ ಅಮೀನ್ ನಿಂದ ಹೊಸ ಟ್ಯಾಂಕ್ ಕೊಡುಗೆ
ವರದಿ : ಹಸೈನಾರ್ ಜಯನಗರ
ಇತ್ತೀಚೆಗೆ ಗೂನಡ್ಕ ಪರಿಸರದಲ್ಲಿ ಸುರಿದ ಭಾರೀ ಮಳೆ ಮತ್ತು ಬೀಸಿದ ಗಂಭೀರ ಗಾಳಿಯಿಂದ ಬಹಳಷ್ಟು ನಷ್ಟ ಸಂಭವಿಸಿದ್ದು ಆ ಪೈಕಿ ಬಡ ಕೂಲಿ ಕಾರ್ಮಿಕರೊಬ್ಬರ ವಾಟರ್ ಟ್ಯಾಂಕ್ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ಪೈಪ್ ಲೈನ್ ನೀರು ಮಾತ್ರ ಅವಲಂಬಿಸುವ ಈ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಯಾಗಿದ್ದು ತಕ್ಷಣ ಇವರ ಕಷ್ಟಕ್ಕೆ ಅಲ್ ಅಮೀನ್ ವೆಲ್ಫೇರ್ ಎಸೋಸಿಯೇಶನ್ ರಿ. ಗೂನಡ್ಕ ಸ್ಪಂದಿಸಿ ಭರವಸೆ ನೀಡಲಾಯಿತು. ಅದರಂತೆ ಹೊಸ ವಾಟರ್ ಟ್ಯಾಂಕ್ ಖರೀದಿಸಿ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಕುಂಞ್ಞಿ ಗೂನಡ್ಕ ರವರು ಫಲಾನುಭವಿ ರಫೀಖ್ ದರ್ಕಾಸ್ ರವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಬದ್ರಿಯಾ ಜುಮಾ ಮಸೀದಿ ಗೂನಡ್ಕ ಕೋಶಾಧಿಕಾರಿ ಎಂ ಬಿ ಇಬ್ರಾಹಿಂ, ಅಲ್ ಅಮೀನ್ ಉಪಾಧ್ಯಕ್ಷ ಸಿ ಎಂ ಅಬ್ದುಲ್ಲ, ಕೋಶಾಧಿಕಾರಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ, ಸಂಘಟನಾ ಕಾರ್ಯದರ್ಶಿ ಹಸೈನಾರ್ ಏ ಟಿ,ಎಸ್ ಬಿ ಎಸ್ ಅಧ್ಯಕ್ಷ ನಿಹ್ಮತ್ತುಲ್ಲಾ ಇಸ್ಹಾಖ್ ಉಪಸ್ಥಿತರಿದ್ದರು.