ಆಪತ್ಕಾಲದಲ್ಲಿ ಆಕಸ್ಮಿಕ ಕರೆ ಬಂದಾಗ ಅಸಹಾಯಕ ಕುಟುಂಬಕ್ಕೆ ನೆರವಾದ ಯುವ ತೇಜಸ್ಸು ಬಳಗ

ಆಪತ್ಕಾಲದಲ್ಲಿ ಆಕಸ್ಮಿಕ ಕರೆ ಬಂದಾಗ ಅಸಹಾಯಕ ಕುಟುಂಬಕ್ಕೆ ಯುವ ತೇಜಸ್ಸು ಬಳಗ ನೆರವಾಗುವ ಮೂಲಕ ಮಾನವೀಯತೆ ಮೆರೆದಿದೆ.

ದೂರದ ದಾವಣಗೆರೆ ಜಿಲ್ಲೆಯ ಶ್ರೀಮತಿ ವೇದಾವತಿ ಅವರು ಮಂಗಳೂರಿನ MIO ಆಸ್ಪತ್ರೆಗೆ ತನ್ನ ಕ್ಯಾನ್ಸರ್ ಪೀಡಿತ ಪತಿ ಶ್ರೀಯುತ ವೀರಣ್ಣ ಗುರಣಗೌಡ ಬಾದೋಡಗಿ(35ವ.) ಅವರನ್ನು ದಾಖಲಿಸಿ ಮಾರಕ ಖಾಯಿಲೆಯ ಕಪಿಮುಷ್ಟಿಯಿಂದ ರಕ್ಷಿಸಿಕೊಳ್ಳಲು ಶತ ಪ್ರಯತ್ನ ನಡೆಸಿ, ಭರವಸೆಯಿಟ್ಟ ವೈದ್ಯರು ಕೈಚೆಲ್ಲಿ ನಿಂತು ನಮ್ಮಿಂದ ಇನ್ನು ಸಾಧ್ಯವಿಲ್ಲ ಮನೆಗೆ ಕರೆದುಕೊಂಡು ಹೋಗಿ ಎಂದಿದ್ದರು.

ಕಡೆಗೂ ವಿಧಿಯ ಆಟಕ್ಕೆ ಸೋತು ಮನೆ ಕಡೆಗೆ ಹೊರಡಲು ಅನುವಾದರು, ಕೈಯಲ್ಲಿ ಬಿಡಿಗಾಸಿಲ್ಲದೇ ವಾಹನ ವ್ಯವಸ್ಥೆ ಮಾಡಲು ಸಾಧ್ಯವಾಗದೆ ಅಸಹಾಯಕ ಸ್ಥಿತಿಯಲ್ಲಿದ್ದಾಗ ಯಾರೋ ನೀಡಿದ ಮಾಹಿತಿಯಂತೆ ಸಮಾಜಕ್ಕೆ ಒಂದು ಆಶಾಕಿರಣ ಎಂಬಂತಿರುವಾ ಯುವ ತೇಜಸ್ಸು ಸಂಸ್ಥೆಗೆ ಕರೆ ಮಾಡಿ ಅಸಹಾಯಕ ಧ್ವನಿಯಲ್ಲಿ ತನ್ನ ಪತಿಯನ್ನು ಈ ಸಂಕಷ್ಟದ ಸಮಯದಲ್ಲಿ ತನ್ನ ಮನೆಗೆ ಸಾಗಿಸುವ ಬಗ್ಗೆ ನೋವು ತೋಡಿಕೊಂಡರು.

ಯುವ ತೇಜಸ್ಸು ಸಂಸ್ಥೆಯು ಸಕಾಲದಲ್ಲಿ ಸ್ಪಂದಿಸಿ ಸತತ ಪ್ರಯತ್ನದ ಫಲವಾಗಿ ನಿನ್ನೆ ಸಂಜೆ ಆಂಬ್ಯುಲೆನ್ಸ್ ಒಂದನ್ನು ಗೊತ್ತು ಮಾಡಿ ವಾಹನದ ಸಂಪೂರ್ಣ ಖರ್ಚನ್ನು ಬರಿಸಿ ದೂರದ ದಾವಣಗೆರೆಯ ಸಂತೆಗಿರಿಗೆ ಕಳಿಸಿಕೊಡಲಾಯಿತು.


ಈ ಹಿಂದೆಯೂ ಲಾಕ್‌ಡೌನ್ ಸಂದರ್ಭದಲ್ಲಿ ಯುವ ತೇಜಸ್ಸಿನ ಸದಸ್ಯರು ಬೆಂಗಳೂರಿಗೆ ಅನಾರೋಗ್ಯ ಪೀಡಿತರೊಬ್ಬರನ್ನು ಕಳುಹಿಸಿ ತನ್ನ ಕರ್ತವ್ಯನಿಷ್ಠೆಯನ್ನು ಮೆರೆದು ಸಮಾಜಕ್ಕೆ ಮಾದರಿಯಾಗಿತ್ತು.

Leave A Reply

Your email address will not be published.