ಸವಣೂರು: ರಸ್ತೆ ಬದಿ ವ್ಯಾಪಾರಕ್ಕೆ ಅವಕಾಶ ಇಲ್ಲ | ಕೊರೊನಾ ಜಾಗೃತಿ ಕಾರ್ಯಪಡೆ ಸಭೆ

ಸವಣೂರು : ಸವಣೂರು ಗ್ರಾ.ಪಂ.ಮಟ್ಟದ ಕೊರೊನಾ ಜಾಗೃತಿ ಕಾರ್ಯಪಡೆ ಸಭೆಯು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ಕಾರ್ಯಪಡೆ ಅಧ್ಯಕ್ಷೆ ಇಂದಿರಾ ಬಿ.ಕೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆ ಬದಿಯಲ್ಲಿ ತರಕಾರಿ ಹಾಗೂ ಹಣ್ಣು ಹಂಪಲು ಸೇರಿದಂತೆ ಯಾವುದೇ ವಸ್ತುಗಳ ಮಾರಾಟಕ್ಕೆ ಅವಕಾಶ ಇಲ್ಲ ಎಂಬ ನಿರ್ಣಯ ಕೈಕೊಳ್ಳಲಾಯಿತು.

ಆರೋಗ್ಯ ಕಾರ್ಯಕರ್ತರು ಹಾಗೂ ಕೊರೊನಾ ಸ್ವಯಂಸೇವಕರಿಗೆ ಗ್ರಾ.ಪಂ.ವತಿಯಿಂದ ಮಾಸ್ಕ್ ನೀಡುವ ಕುರಿತು ನಿರ್ಧರಿಸಲಾಯಿತು.

ಸರಕಾರದ ನಿಯಮದಂತೆ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಸವಣೂರು ಗ್ರಾ.ಪಂ.ವ್ಯಾಪ್ತಿಯಲ್ಲೂ ವ್ಯಾಪಾರ ವಹಿವಾಟಿಗೆ ಅವಕಾಶ ಇದೆ.ಸಮಯ ಕಡಿತವಾದರೆ ಅನಗತ್ಯ ಗೊಂದಲ ಹಾಗೂ ಜಂಗುಳಿಯಾಗುತ್ತದೆ.ಇದರಿಂದಾಗಿ ಸರಕಾರದ ನಿಯಮದಂತೆ ಮುಂದುವರಿಯುವ ಕುರಿತು ನಿರ್ಣಯಿಸಲಾಯಿತು.

ಬೆಳ್ಳಾರೆ ಠಾಣಾ ಎಸೈ ಆಂಜನೇಯ ರೆಡ್ಡಿ ಮಾತನಾಡಿ,ಅನುಮತಿ ಇಲ್ಲದೆ ಸಾರ್ವಜನಿಕ ಪ್ರದೇಶದಲ್ಲಿ ವ್ಯಾಪಾರ ನಡೆಸಿದರೆ ಇಲಾಖೆಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳತ್ತೇವೆ ಎಂದರು.

ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ರವಿಕುಮಾರ್, ಸದಸ್ಯರಾದ ಗಿರಿಶಂಕರ ಸುಲಾಯ, ರಫೀಕ್ ಎಂ.ಎ,ಸತೀಶ್ ಬಲ್ಯಾಯ, ಮೀನಾಕ್ಷಿ ಬಂಬಿಲ,ಚೆನ್ನು ಮಾಂತೂರು,ರಾಜೀವಿ ಶೆಟ್ಟಿ, ಗಾಯತ್ರಿ ಬರೆಮೇಲು,ನಾಗೇಶ್ ಓಡಂತರ್ಯ,ಸತೀಶ್ ಅಂಗಡಿಮೂಲೆ,ಪ್ರಕಾಶ್ ಕುದ್ಮನಮಜಲು, ಕೊರೊನಾ ಕಾರ್ಯಪಡೆ ಸದಸ್ಯರಾದ ಅಂಗನವಾಡಿ ಕಾರ್ಯಕರ್ತೆಯರಾದ ಶೇಷಮ್ಮ,ಕಾವ್ಯಾ,ವಿಜಯ ಈಶ್ವರ ಗೌಡ,ಆಶಾ ಕಾರ್ಯಕರ್ತರಾದ ಸುಮತಿ,ಹೇಮಾವತಿ,ಸರಸ್ವತಿ, ಕೊರೊನಾ ಸೈನಿಕರಾದ ಇರ್ಷಾದ್ ಸರ್ವೆ,ಪ್ರವೀಣ್ ಚೆನ್ನಾವರ, ಪುಣ್ಚಪ್ಪಾಡಿ ಗ್ರಾಮಕರಣಿಕ ಸುನಿಲ್ ಕುಮಾರ್ ಉಪಸ್ಥಿತರಿದ್ದರು.

ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನಾರಾಯಣ ಬಟ್ಟೋಡಿ ಸ್ವಾಗತಿಸಿ, ಲೆಕ್ಕ ಸಹಾಯಕ ಎ.ಮನ್ಮಥ ವಂದಿಸಿದರು.ಸಿಬಂದಿಗಳಾದ ಪ್ರಮೋದ್ ಕುಮಾರ್ ರೈ,ದಯಾನಂದ ಮಾಲೆತ್ತಾರು,ಜಯಾ ಕೆ,ಜಯಶ್ರೀ, ಶಾರದಾ ಸಹಕರಿಸಿದರು.

Leave A Reply

Your email address will not be published.