ಕುಕ್ಕೆ ಸುಬ್ಬಪ್ಪನ ಅನ್ನಪ್ರಸಾದ ತಿಪ್ಪೆಗೆ | ನಿರಾಶ್ರಿತ ಕಾರ್ಮಿಕರ ಕೆಲಸಕ್ಕೆ ವ್ಯಾಪಕ ಆಕ್ರೋಶ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ವತಿಯಿಂದ ನಡೆಸಲ್ಪಡುತ್ತಿರುವ ನಿರಾಶ್ರಿತರ ಕೇಂದ್ರದಲ್ಲಿ ಅನ್ನ ಚೆಲ್ಲುತ್ತಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಚರ್ಚೆಗೆ ಕಾರಣವಾಗಿದೆ.

ಸುಬ್ರಹ್ಮಣ್ಯದಲ್ಲಿ ಅಭಯ ವಸತಿಗೃಹದಲ್ಲಿ ರುವವರಿಗೆ ಸೋಮವಾರದಂದು ತಯಾರಿಸಿದ ಅನ್ನ ವನ್ನು ದೊಡ್ಡ ಕಟಾರವೊಂದರಲ್ಲಿ ತುಂಬಿಸಿ ಟ್ರಾಕ್ಟರ್ ಗೆ ಸುರಿದು ಚೆಲ್ಲುತ್ತಿರುವುದಾಗಿದೆ.

ಆಹಾರದ ಅಗತ್ಯ ಇರುವ ಈ ತುರ್ತು ಸಂದರ್ಭದಲ್ಲಿ ಸಾರ್ವಜನಿಕವಾಗಿ ಅನ್ನ ಬಿಸಾಡುತ್ತಿರುವು್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಗುಲದ ಮಾಹಿತಿಯಂತೆ ಕಾರ್ಮಿಕರೆಲ್ಲರೂ ಬಿಹಾರದವರಾಗಿದ್ದ ಕಾರಣ ಬೆಳ್ತಿಗೆ ಊಟ ಮಾಡುತ್ತಿಲ್ಲ.ಇದರಿಂದಾಗಿ ಅನ್ನ ಉಳಿದಿದ್ದು ಅದನ್ನು ಬಿಸಾಡಿದ್ದಾರೆ. ಈ ಬಗ್ಗೆ ದೇವಸ್ಥಾನದವರ ಗಮನಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಜಾಗ್ರತೆ ವಹಿಸುವುದಾಗಿಯೂ ಕಾರ್ಮಿಕರಿಗೆ ಇನ್ಮುಂದೆ, ಚಪಾತಿ ವ್ಯವಸ್ಥೆ ಮಾಡಲು ಸಿದ್ದತೆ ಮಾಡಲಾಗಿದೆ.

Leave A Reply

Your email address will not be published.