ಇಂದಿನಿಂದ KSRTC ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಆರಂಭ

ಬೆಂಗಳೂರು :ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿನಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯಿಂದ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ನೀಡಲಾಗಿದೆ. ಹೊರ ರಾಜ್ಯದ ಪ್ರಯಾಣಿಕರಿಗೆ ಆನ್ ಲೈನ್ ಬುಕ್ಕಿಂಗ್ ಆರಂಭಿಸಿರುವ ಕೆ ಎಸ್ ಆರ್ ಟಿ ಸಿ ಇನ್ನು ಓಡಾಟವನ್ನು ಆರಂಭಿಸಲಿದೆ.

ಸೇವಾ ಸಿಂಧು ವೆಬ್ ಸೈಟ್ ಮೂಲಕ ಹೊರ ರಾಜ್ಯಗಳಿಗೆ ತೆರಳುವವರಿಗಾಗಿ ಈ ಸೇವೆಯನ್ನು ಕೆ ಎಸ್ ಆರ್ ಟಿ ಸಿ ಆರಂಭಿಸಿದೆ. ಇಂದು ಸಂಜೆ ಬಸ್ ಸಂಚಾರದ ವೇಳಾಪಟ್ಟಿಯನ್ನು ಕೆ ಎಸ್ ಆರ್ ಟಿ ಸಿ ಪ್ರಕಟಿಸಲಿದೆ. ಈ ಮೂಲಕ ಹೊರ ರಾಜ್ಯದ ಪ್ರಯಾಣಿಕರಿಗೆ ಕೆ ಎಸ್ ಆರ್ ಟಿ ಸಿ ಅನುಕೂಲ ಕಲ್ಪಿಸಿಕೊಟ್ಟಿದೆ.

ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಕ್ಕೆ ತೆರಳುವವರಿಗಾಗಿ ಕೆ ಎಸ್ ಆರ್ ಟಿ ಸಿ ಬುಕ್ಕಿಂಗ್ ಆರಂಭಿಸಿದೆ.

Leave A Reply

Your email address will not be published.