ಸುಳ್ಯ | ಅಮರ ಸಂಘಟನೆಯಿಂದ ‘ಅಮ್ಮ ಐ ಲವ್ ಯೂ ‘ ಅಭಿಯಾನ

ಮೇ 10 ರಂದು ವಿಶ್ವ ತಾಯಂದಿರ ದಿನದ ಪ್ರಯುಕ್ತ ಅಮರ ಸಂಘಟನಾ ಸಮಿತಿ ವತಿಯಿಂದ ವಿಶೇಷ ಅಭಿಯಾನವೊಂದನ್ನು ಆಯೋಜಿಸಲಾಗಿತ್ತು. “ಅಮ್ಮ ಐ ಲವ್ ಯೂ” ಎಂಬ ಶೀರ್ಷಿಕೆಯಡಿ ಸೆಲ್ಫಿ ಫೋಟೋ ಅಭಿಯಾನವನ್ನು ಆಯೋಜಿಸಲಾಗಿತ್ತು.

ಅಮರ ಮುಡ್ನೂರು ಹಾಗೂ ಪಡ್ನೂರಿನ ಅಮರ ಸಂಘಟನಾ ಸಮಿತಿ ನಡೆಸಿದ ಈ ಅಭಿಯಾನದಲ್ಲಿ ಸುಮಾರು ಇನ್ನೂರಕ್ಕೂ ಮಿಕ್ಕಿ ಸೆಲ್ಫಿ ಫೋಟೋಗಳು ಸಂಗ್ರಹವಾಗುವುದರ ಮುಖಾಂತರ ಅಭಿಯಾನ ಯಶಸ್ವಿಯಾಗಿದೆ.

ಎಲ್ಲಾ ತಾಯಂದಿರ ಆಶೀರ್ವಾದ ಸಂಘಟನೆಯ ಮೇಲಿರಲಿ ಮತ್ತು ಅಭಿಯಾನ ಯಶಸ್ವಿಯಾಗಲು ಸಹಕರಿಸಿದ ಪ್ರತಿಯೊಬ್ಬರಿಗೂ ಹೃದಯಸ್ಪರ್ಶಿ ಧನ್ಯವಾದಗಳನ್ನು ಅರ್ಪಿಸುತಿದ್ದೇವೆ ಎಂದು ಅಮರ ಸಂಘಟನಾ ಸಮಿತಿಯವರು ತಿಳಿಸಿದರು.

ತನ್ನದೇ ಆದ ಶೈಲಿಯಲ್ಲಿ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಅಮರ ಸಂಘಟನಾ ಸಂಸ್ಥೆ ಇದೀಗ ಮತ್ತೊಮ್ಮೆ ಜನರ ಮನದಲ್ಲಿ ತಾನು ಎಂದೆಂದೂ ಅಮರ ಎಂದು ತೋರಿಸಿದಂತಾಗಿದೆ.

Leave A Reply

Your email address will not be published.