ದ.ಕ -ಉಡುಪಿ ಓಡಾಟಕ್ಕೆ ಉದ್ಯೋಗಸ್ಥರಿಗೆ ಬೇಕಿಲ್ಲ ಪಾಸ್

ಅವಿಭಜಿತ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಮದ್ಯೆ ಜನ ಸಂಚಾರಕ್ಕೆ ಇದ್ದ ನಿರ್ಬಂಧವನ್ನು ರಾಜ್ಯ ಸರ್ಕಾರ ಕೊಂಚ ಸಡಿಲಿಕೆ ಮಾಡಿದ್ದು, ಉಭಯ ಜಿಲ್ಲೆಗಳ ಉದ್ಯೋಗಗಸ್ಥರು ಇನ್ನು ಮುಂದೆ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಯಾವುದೇ ಅಂತರ್ ಜಿಲ್ಲಾ ಪಾಸ್ ವ್ಯವಸ್ಥೆ ಇಲ್ಲದೆ ಓಡಾಡಬಹುದಾಗಿದೆ.

ಈ ಬಗ್ಗೆ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಂದೇ ಘಟಕೆವಾಗಿ ಪರಿಗಣಿಸಲು ಎರಡು ಜಿಲ್ಲಾಡಳಿತಕ್ಕೂ ಸೂಚನೆ ನೀಡಿದೆ. ಸಾರ್ವಜನಿಕರು ತಾವು ಕೆಲಸ ಮಾಡುತ್ತಿರುವ ಕಂಪನಿ, ಸಂಸ್ಥೆಯಿಂದ ನೀಡಲಾಗುವ ಪತ್ರದ ಮೇರೆಗೆ ಮತ್ತು ಕಂಪನಿ ಸಂಸ್ಥೆಯ ಗುರುತಿನ ಚೀಟಿಯೊಂದಿಗೆ ಮಾತ್ರ ಚಲನವಲಗಳಿಗೆ ಅನುಮತಿಸಿದೆ.

Leave A Reply

Your email address will not be published.