ಸುಳ್ಯ |ಕುರುಂಜಿ ಎಂಟರ್ ಪ್ರೈಸಸ್ ಸುಳ್ಯ ವತಿಯಿಂದ ದ.ಕ.ಪೊಲೀಸ್ ಇಲಾಖೆಗೆ 100ಪಿಪಿಇ ಕಿಟ್ ಹಸ್ತಾಂತರ

ಮಹಾಮಾರಿ ಕೋರೋಣ ವೈರಸ್ ದೇಶವ್ಯಾಪ್ತಿ ಆತಂಕವನ್ನು ಹೆಚ್ಚಿಸಿದ್ದು ಕಳೆದ ಎರಡು ತಿಂಗಳಿನಿಂದ ಇದರ ವಿರುದ್ಧ ಹೋರಾಟದಲ್ಲಿ ಪೊಲೀಸ್ ಇಲಾಖೆಯು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ .ಇವರ ರಕ್ಷಣೆಗಾಗಿ ಸುಳ್ಯ ಕೆವಿಜಿ ಸಂಸ್ಥೆಯ ಅಂಗವಾದ ಕುರುಂಜಿ ಎಂಟರ್ಪ್ರೈಸಸ್ ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಗೆ 100 ಪಿ ಪಿ ಇ ಕಿಟ್ ಹಸ್ತಾಂತರಿಸಲಾಯಿತು. ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ ಚಿದಾನಂದ ರವರು ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ಅವರಿಗೆ ಮೇ 7ರಂದು ಸುಳ್ಯ ಕೆವಿಜಿ ಸಂಸ್ಥೆಯಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಅಕ್ಷಯ್ ಕೆ ಸಿ ,ಡಾ. ಸತ್ಯವತಿ , ಡಾ .ಲೀಲಾಧರ್, ರಜತ್ ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಉಪ ನಿರೀಕ್ಷಕ ಎಂ ಆರ್ ಹರೀಶ್, ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.