ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಜಾಲತಾಣ ಸಮನ್ವಯ ಸಮಿತಿಗೆ ದ.ಕ. ಜಿಲ್ಲೆಯ ಇಬ್ಬರು ಮಹಿಳೆಯರು
ಮಂಗಳೂರು, ಮೇ 7 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯ ಸೋಷಿಯಲ್ ಮೀಡಿಯಾದ ಕೋ ಆರ್ಡಿನೇಷನ್ ಸಮಿತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಇಬ್ಬರು ಮಹಿಳೆಯರನ್ನು ನಿಯೋಜಿಸಲಾಗಿದೆ.
ದ.ಕ. ಜಿಲ್ಲೆಯ ಲಾವಣ್ಯಾ ಬಲ್ಲಾಳ್ ಮತ್ತು ಶೇರಿಲ್ ಅಯೋನ ಆ ಇಬ್ಬರಾಗಿದ್ದಾರೆ.
ಅಲ್ಲದೇ ಕೋ ಆರ್ಡಿನೇಷನ್ ಸಮಿತಿಗೆ ಹೆಚ್ಚುವರಿಯಾಗಿ ಇನ್ನೂ ಒಂಬತ್ತು ಸದಸ್ಯರನ್ನು ಆಯ್ಕೆ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಲಾವಣ್ಯಾ ಬಲ್ಲಾಳ್ ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರ ಹೀಗೆ ಸೇರಿದವರಾಗಿದ್ದು, ಹಲವಾರು ವರ್ಷಗಳಿಂದ ಮಹಿಳಾ ಕಾಂಗ್ರೆಸ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವಿ. ಶೆರಿಲ್ ಅಯೋನ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದವರಾಗಿದ್ದು, ರಾಜ್ಯಮಟ್ಟದ ಮಹಿಳಾ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು.
ಜಾಲತಾಣ ವಿಭಾಗವನ್ನು ಇವರು ಯಶಸ್ವಿಯಾಗಿ ನಿರ್ವಹಿಸಿದ ಕಾರ್ಯವನ್ನು ಗುರುತಿಸಿದ ಕೆಪಿಸಿಸಿ ಅಧ್ಯಕ್ಷರು ಅವರಿಗೆ ಈ ಸ್ಥಾನ ನೀಡಿದ್ದಾರೆ. ಇದು ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಹೆಮ್ಮೆಯ ವಿಷಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.