ಕಾಶಿಪಟ್ಣದ ಉರ್ಪಾಡಿ ಮನೆ ರವಿ ಆತ್ಮಹತ್ಯೆ | ಪತ್ನಿಯ ಮನೆಯಿಂದ ವಾಪಸ್ ಬಂದ ಕೂಡಲೇ ದುಡುಕಿನ ನಿರ್ಧಾರ
ಪ್ರಗತಿಪರ ಕೃಷಿಕ ಹಾಗೂ ಮೇಸ್ತ್ರಿ ಕೆಲಸಗಾರರೂ ಆಗಿದ್ದ ರವಿ ಅವರು ಮೇ. 6 ರಂದು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಶಿಪಟ್ಣದ ಉರ್ಪಾಡಿ ಮನೆ ನಿವಾಸಿಯಾಗಿದ್ದ ನಿನ್ನೆ
ರಾತ್ರಿ ಮನೆಯ ಪಕ್ಕದ ಮರಕ್ಕೆ ಹೇಳು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಮೃತರಿಗೆ 37 ವರ್ಷ ವಯಸ್ಸಾಗಿತ್ತು.
ರವಿ ಅವರ ಪತ್ನಿ ಹೆರಿಗೆಯಾಗಿ ತವರು ಮನೆಯಿಂದ ಇತ್ತೀಚೆಗೆ ವಾಪಸ್ ಗಂಡನ ಮನೆಗೆ ಬಂದಿದ್ದವರು ಮತ್ತೆ ತವರು ಮನೆಗೆ ಹೋಗಿದ್ದರು. ಸಣ್ಣಮಟ್ಟದ ಕೌಟುಂಬಿಕ ಸಾಮರಸ್ಯ ಇತ್ತೆಂದು ಹೇಳಲಾಗಿದೆ. ರವಿ ಅವರು ಮೊನ್ನೆ ಪತ್ನಿಯಿಂದ ಮಾವನ ಮನೆಗೆ ಹೋಗಿದ್ದರು. ಅಲ್ಲಿ ಏನು ಘಟನಾವಳಿ ನಡೆಯಿತು ಎಂಬ ಬಗ್ಗೆ ಮಾಹಿತಿ ಸದ್ಯಕ್ಕಿಲ್ಲ.
ನಿನ್ನೆ ಬೆಳಿಗ್ಗೆ ಕಾಶಿಪಟ್ಣಕ್ಕೆ ಮರಳಿದ್ದರು. ಅಂದೇ ರಾತ್ರಿ 9 ಗಂಟೆಗೆ ಮನೆಯಲ್ಲಿ ರವಿಯವರು ಎಲ್ಲಿಗೋ ಹೊರಟು ಹೋಗಿದ್ದರು. ಮನೆಯವರು ಹೊರಬಂದು ಹುಡುಕಾಡಿದಾಗ ಅವರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ.
ಪ್ರಗತಿಪರ ಕೃಷಿಕರಾಗಿರುವ ರವಿ ಅವರಿಗೆ ಹೇಳಿಕೊಳ್ಳುವಂತಹ ಬೇರೆ ಯಾವುದೇ ಸಮಸ್ಯೆ ಇರಲಿಲ್ಲ. ಪತ್ನಿಯ ಮನೆಗೆ ಹೋಗಿ ಬಂದವರು ಹೀಗೆ ಹುಡುಕಿನ ನಿರ್ಧಾರಕ್ಕೆ ಕೈಹಾಕಿ, ಉತ್ತಮ ಕೃಷಿಯಿಂದ ಆದಾಯ ಬರುತ್ತಿರುವ ಸನ್ನಿವೇಶದಲ್ಲಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ. ರವಿ ಅವರು ತಾಯಿ ಶೀಲಾ, ಪತ್ನಿ ರೇಷ್ಮಾ, ಸಹೋದರ ರಾಜೇಶ್ ಅವರ ಜೊತೆಯಾಗಿ ತನ್ನ 5 ತಿಂಗಳ ಮಗು ರಚನಾ ಅವರನ್ನು ಅಗಲಿದ್ದಾರೆ.
ಅಧ್ಯಕ್ಷ ಸತೀಶ್ ಕಾಶಿಪಟ್ಣ,ಸದಸ್ಯ ಪ್ರವೀಣ್ ಪಿಂಟೋ ಹಾಗೂ ಸ್ಥಳೀಯ ನೂರಾರು ಜನರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಘಟನೆ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.