ಕೇರಳ ಕರ್ನಾಟಕ ಗಡಿ ಭಾಗದಲ್ಲಿ ತೆರವು ಗೊಳಿಸಿದ ಮಣ್ಣು | ಬಿಗಿ ಗೊಳಿಸಿದ ಪೊಲೀಸ್ ಭದ್ರತೆ
ಕೊರೊನ ಮಹಾಮಾರಿ ವೈರಸ್ ನ ಹಿನ್ನಲೆ ಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕೇರಳ ಕಾಸರಗೋದಿಡಿಗೆ ಸಂಪರ್ಕಿಸುವ ಗಡಿ ಭಾಗವಾದ ಮುರೂರು ಬಳಿ ರಸ್ತೆ ಯಲ್ಲಿ ಮಣ್ಣು ರಾಶಿಯನ್ನು ಹಾಕಿ ವಾಹನ ಸಂಚಾರಕ್ಕೆ ಕಟ್ಟು ನಿಟ್ಟಿನಲ್ಲಿ ನಿರ್ಬಂಧ ವನ್ನು ಹೇರಲಾಗಿತ್ತು.
ಇದೀಗ ಲಾಕ್ ಡೌನ್ ನ ಮೂರನೇ ಹಂತದಲ್ಲಿ ಕೇಂದ್ರ ಸರಕಾರವು ಲಾಕ್ ಡೌನ್ ನಲ್ಲಿ ಅಲ್ಪ ಮಟ್ಟದ ಸಡಿಲಿಕೆ ನೀಡಿದ್ದು ಇದರ ಅಂಗವಾಗಿ ಆಯಾ ರಾಜ್ಯ ಗಳಲ್ಲಿ ಮತ್ತು ಜಿಲ್ಲೆ ಗಳಲ್ಲಿ ಬಾಕಿಯಾಗಿದ್ದ ಜನರಿಗೆ ತಮ್ಮತಮ್ಮ ಊರುಗಳಿಗೆ ಸೇರಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಗಡಿಭಾಗಗಳಲ್ಲಿ ಯಾತ್ರಿಕರ ಸಂಖ್ಯೆಯೂ ಹೆಚ್ಚಾಗಿರುವುದರಿಂದ ಜನರ ಅರೋಗ್ಯ ಮತ್ತು ರಕ್ಷಣೆ ಹಿನ್ನಲೆ ಯಲ್ಲಿ ಜಿಲ್ಲಾಡಳಿತ ಸೂಕ್ತ ಭದ್ರತಾ ಕ್ರಮವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದು ,ಜಿಲ್ಲೆ ಯಿಂದ ಹೊರ ಜಿಲ್ಲೆಗೆ ಯಾತ್ರಿಸುವವರನ್ನು ಅದೇ ರೀತಿ ಹೊರ ಜಿಲ್ಲೆಯಿಂದ ನಮ್ಮ ಜಿಲ್ಲಿಗೆ ಆಗಮಿಸುತ್ತಿರುವರನ್ನು ಗಡಿ ಪ್ರದೇಶದ ಚೆಕ್ಪೋಸ್ ಗಳಲ್ಲಿ ತೀರ್ವ ಪರಿಶೋದನೆಯನ್ನು ನಡೆಸಿ ಅವರ ಬಳಿ ಇರುವ ಪಾಸ್ ಗಳಲನ್ನು ತೀವ್ರ ಪರಿಶೀಲನೆ ನಡೆಸಲಾಗುತ್ತಿದೆ.
ಈ ಭಾಗ ಗಳಲ್ಲಿ ರಸ್ತೆ ಯಲ್ಲಿ ಸುರಿದಿದ್ದ ಮಣ್ಣು ಗಳನ್ನು ತೆರವು ಗೊಳಿಸಿ ಬ್ಯಾರಿಗೆಟ್ ಗಳನ್ನು ಅಳವಡಿಸಲಾಗಿದೆ. ಈ ಸಂಬಂಧ ಪತ್ರಿಕೆಗೆ ಹೇಳಿಕೆಯನ್ನು ನೀಡಿದ ಸುಬ್ರಹ್ಮಣ್ಯ ಠಾಣಾ ಉಪನಿರೀಕ್ಷಕ ಓಮನಾ ಎನ್ ಕೆ ಪತ್ರಿಕಾ ಹೇಳಿಕೆಯನ್ನು ನೀಡಿ ಕರ್ನಾಟಕ ಕೇರಳ ಭಾಗದ ಚೆಕ್ಪೋಸ್ಟ್ ಗಳಲ್ಲಿ ಮುರೂರ್ ಚೆಕ್ಪೋಸ್ಟ್ ಕೂಡ ಒಂದಾಗಿದ್ದು ಇಲ್ಲಿಯ ಭದ್ರತೆಯನ್ನು ಯಶಸ್ವಿಯಾಗಿ ನಿಭಾಯಿಸುತಿದ್ದೇವೆ. ಜನರ ಆರೋಗ್ಯದ ರಕ್ಷಣೆ ಮತ್ತು ಸಾಮಾಜಿಕ ಕಳಕಳಿ ಅತಿಮುಕ್ಯವಾದದ್ದು.
ಇದಕ್ಕೆ ಜನ ಸಾಮಾನ್ಯರು ಪೊಲೀಸ್ ಇಲಾಖೆಯೊಂದಿಗೆ ವೈರಸ್ ನ ವಿರುದ್ಧ ಹೋರಾಡಲು ಕೈಜೋಡಿಸ ಬೇಕಾಗಿದೆ. ಇದರೊಂದಿಗೆ ತಾಲೂಕು ಆಡಳಿತದಿಂದ ಆರೋಗ್ಯ ಇಲಾಖೆ,ರೆವೆನ್ಯೂ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಗ್ರಹರಕ್ಷಕದಳದ ಸಿಬ್ಬಂದಿಗಳು ಈ ಚೆಕ್ ಪೋಸ್ಟಿನಲ್ಲಿ ನಮ್ಮೊಂದಿಗಿದ್ದಾರೆ .
ಹೊರ ಜಿಲ್ಲೆಯಿಂದ ಈ ಚೆಕ್ಪೋಸ್ಟ್ ಮೂಲಕ ನಮ್ಮ ಜಿಲ್ಲೆಗೆ ಬಂದು ನಿಲ್ಲುವವರಿಗೆ ಸ್ಥಳದಲ್ಲೇ ಇಲ್ಲಿ ಇರುವ ಆಶಾ ಕಾರ್ಯಕರ್ತರು, ವೈದ್ಯಕೀಯ ತಪಾಸಣೆ ನಡೆಸಿ ಕೈಗೆ ಸೀಲ್ ಗಳನ್ನು ಹಾಕಿ 14 ದಿನಗಳ ಕ್ವಾರೆಂಟೈನ್ ನಲ್ಲಿ ಕಡ್ಡಾಯವಾಗಿ ಇರುವಂತೆ ಸೂಚನೆಯನ್ನು ನೀಡಲಾಗುತ್ತಿರುದು.
ಹಾಗೂ, ಹೊರ ಜಿಲ್ಲೆಗೆ ಹೋಗುವವರು ಆನ್ಲೈನ್ ಮೂಲಕ ಪಾಸನ್ನು ಪಡೆಯುವವರು ಕೇವಲ ಅದರ ಪತ್ರವನ್ನು ಮತ್ತು ವೈದ್ಯಕೀಯ ತಪಾಸಣೆ ಪತ್ರವನ್ನು ಮಾತ್ರ ತೆಗೆದು ಕೊಂಡು ಬರುತ್ತಿರುವುದು ಕಂಡು ಬರುತ್ತಿದೆ. ಆದರೆ ಇದರಿಂದ ಮಾತ್ರ ಅವರನ್ನು ಕಳುಹಿಸಿ ಕೊಡಲು ಆಗುವುದಿಲ್ಲ. ಅದ್ದರಿಂದ ಸಂಪೂರ್ಣ ಪಾಸ್ ದೊರಕುವ ವರಗೆ ಕಾದು ನಂತರ ಅದನ್ನು ಪಡೆದುಕೊಂಡು ಬರತಕ್ಕದು ಎಂದು ಅವರು ಹೇಳಿದರು.