ಪೆರ್ನಾಲ್ ಹೆಸರಲ್ಲಿ ಡ್ರೆಸ್ ಖರೀದಿಸಲು ಪೇಟೆಯಲ್ಲಿ ಕಂಡರೆ ಮುಂದಿನ ದುರಂತದ ಬಗ್ಗೆ ನೀವೇ ಜವಾಬ್ದಾರಿ – ಇಕ್ಬಾಲ್ ಬಾಳಿಲಕೋವಿಡ್ 19 ರೋಗ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಸೀದಿಗೂ ಹೋಗದೆ ಲಾಕ್ ಡೌನ್ ನಿಯಮವನ್ನು ಪಾಲಿಸಿದ್ದೇವೆ.
ಪುಣ್ಯಗಳು ತುಂಬಿರುವ ಪರಿಶುದ್ದ ರಮಲಾನ್ ಇಬಾದತ್ ಕೂಡಾ ಮನೆಯಲ್ಲೇ ನಿರ್ವಹಿಸುತ್ತಿದ್ದೇವೆ.


ಹೀಗಿರುವಾಗ ಈದ್ ಹಬ್ಬಕ್ಕೆ ಬಟ್ಟೆ ಧರಿಸುವ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿದ್ದು
ಬುದ್ದಿ ಇರುವ ಯಾವನೇ ಒಬ್ಬನು ಹೊಸ ಬಟ್ಟೆ ಖರೀದಿಸಲಾರ ಎಂಬುವುದು ವಾಸ್ತವ.


ಈಗಾಗಲೇ ಖಾಝಿಗಳು ಮಸೀದಿಯ ಖತೀಬರು ಹಾಗೂ ಜಮಾಅತ್ ಕಮಿಟಿಯಿಂದಲೂ
ಸರಳವಾಗಿ ಆಚರಿಸುವಂತೆ ಕರೆ ನೀಡಲಾಗಿದೆ.
ಆದರೂ ಕೆಲವರು ಬಟ್ಟೆ ಬಗ್ಗೆ ಯಾಕಿಷ್ಟು ಚರ್ಚೆ ಅದು ಅವರವರ ವಿಚಾರಕ್ಕೆ ಬಿಟ್ಟದ್ದು ಅಂತ ಅಂತರ್ಜಾಲದಲ್ಲಿ ಗೀಚಿದನ್ನು ನೋಡಿದ್ದೇನೆ.


ಯಾವುದಾದರೂ ನೆಪವೊಡ್ಡಿ ವಸ್ತ್ರ ಕರೀದಿಸಲು ಬಂದು ಅನಾಹುತಗಳಿಗೆ ಕಾರಣರಾದರೆ
ನೀವೆ ಜವಾಬ್ದಾರರು.
ಹಾಗೆ ಬಟ್ಟೆ ತೆಗೆಯುವ ಹಣವಿದ್ದರೆ ನಿಮ್ಮ ಪರಿಸರದಲ್ಲಿರುವ ಒಪ್ಪೊತ್ತಿನ ಊಟಕ್ಕಾಗಿ ಪರದಾಡುವ ಬಡವರಿಗೆ ಹಂಚಿಬಿಡಿ
ಅದು ಶ್ರೇಷ್ಠ ಕಾರ್ಯವಾಗಿವೆ.


ಬಟ್ಟೆಯ ಹೆಸರಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಅಂತರ ಕಾಯುವಿಕೆ ವಿರುದ್ದವಾಗಿ ನಡೆದರೆ ಕಾನೂನಿನ ಸಲಹೆ ಪಡೆದು ಕ್ವಾರಂಟೈನಿಗೆ ಕಲುಹಿಸಿ ಕೊಡಲಾಗುವುದೆಂದು ಪ್ರಗತಿಪರ ಚಿಂತಕ ಇಕ್ಬಾಲ್ ಬಾಳಿಲ ಎಚ್ಚರಿಕೆ ನೀಡಿದ್ದಾರೆ.


ರಮಲಾನ್ ದಿನದ ಇಬಾದತನ್ನು ಮನೆಯಲ್ಲೇ ನಿರ್ವಹಿಸುವಾಗ
ಮಸೀದಿಗೆ ಪ್ರವೇಶ ಇಲ್ಲವೆಂದಾಗ ಬಟ್ಟೆಗಾಗಿ ಅಂಗಡಿ ಹೋಗಲು ಸತ್ಯವಿಶ್ವಾಸಿಯ ಮನಸ್ಸು ಒಪ್ಪುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.