ಧರ್ಮಸ್ಥಳ ಗ್ರಾ. ಪಂ. ಸದಸ್ಯ ಸುಧಾಕರ ಗೌಡ ನೇತೃತ್ವದಲ್ಲಿ ನಾರ್ಯ ದೊಂಡೋಲೆಯಲ್ಲಿ 200 ಕಿಟ್ ವಿತರಣೆ
ಇತ್ತೀಚೆಗೆ ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರು ಬೆಳ್ತಂಗಡಿ ತಾಲ್ಲೂಕಿನಲ್ಲಿ 30000 ಕಿಟ್ ಗಳನ್ನ ವಿತರಿಸಿ ‘ ಆಹಾರ ಯಜ್ಞ ‘ ಮಾಡಿದ್ದರು. ಅದು ಎಲ್ಲೆಡೆ ಪ್ರಶಂಸೆಗೆ ಮತ್ತು ಅಚ್ಚರಿಗೆ ಕಾರಣವಾಗಿತ್ತು.
ಈಗ ಅದೇ ಮಾದರಿಯಲ್ಲಿ ಧರ್ಮಸ್ಥಳದ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸುಧಾಕರ್ ಗೌಡ ಅವರು ಕಾರ್ಯೋನ್ಮುಖರಾಗಿದ್ದಾರೆ. ಈ ಮೊದಲು ನಾರ್ಯ ದೊಂಡೋಲೆ ವ್ಯಾಪ್ತಿಯಲ್ಲಿ ಶಾಸಕರ ಕಡೆಯಿಂದ 100 ಕಿಟ್ ಗಳು ಬಂದಿದ್ದವು. ಆನಂತರ ಕೂಡ ಕೆಲವು ಬಡ ಕುಟುಂಬಗಳಿಗೆ ಆಹಾರದ ಸಮಸ್ಯೆ ಕಂಡುಬಂದಿದ್ದು ಅದಕ್ಕೆ ಶ್ರೀ ಸುಧಾಕರ್ ಗೌಡ ಮತ್ತವರ ತಂಡ ತಕ್ಷಣ ಸ್ಪಂದಿಸಿದೆ. ಅವರು ಕೂಡಲೇ ಹಲವು ದಾನಿಗಳನ್ನು ಗುರುತಿಸಿ ಅವರಿಂದ ಸಹಾಯವನ್ನು ಪಡೆದು ಮತ್ತೆ 200 ಕಿಟ್ ತಯಾರಿಸಿ ಸ್ಥಳೀಯ ಜನರಿಗೆ, ಆಶಾ ಕಾರ್ಯ ಮತ್ತಿತರ ಬಡವರಿಗೆ ಹಂಚಿದ್ದಾರೆ. ತನ್ನ ವ್ಯಾಪ್ತಿಯ ವಾರ್ಡ್ ಅಲ್ಲದೆ ಬೇರೆ ವಾರ್ಡ್ ಗಳಿಗೂ ಸಹಾಯ ಹಸ್ತ ಚಾಚಿದ್ದು ಇಡೀ ತಾಲೂಕಿಗೆ ಮಾದರಿಯಾಗಿದೆ.
ಊರಿನ ದಾನಿಗಳಾದ DR ರಾಜ್ ರೋಡ್ ಕಾಂಟ್ರಾಕ್ಟ್, ಉದಯ ಕುಮಾರ್ ಭಟ್ AE ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಾಗರ್ ಪವರ್ ಪ್ರೊಜೆಕ್ಟ್ ದೊಂಡೋಲೆ, ಸಂತೋಷ್ ಜೈನ್ ನಾರ್ಯ,ಸೂರ್ಯನಂದ ರಾವ್ ದೊಂಡೋಲೆ, ಸತ್ಯಪ್ರೀಯ ಕಲ್ಲೂರಾಯ ದೊಂಡೋಲೆ (ಅರ್ಚಕರು ಸೌತಡ್ಕ), ಸುಬ್ರಹ್ಮಣ್ಯ ಉಪಾಧ್ಯಾಯ ನಾರ್ಯ, ಪುರಂದರ್ ರಾವ್ ಸೃಷ್ಠಿ ನಿಲಯ ನಾರ್ಯ, ಶ್ರೀಧರ ಕೇದಿಲಾಯ ನಾರ್ಯ, ಶ್ರೀನಿವಾಸ್ ಭಟ್ ದೊಂಡೋಲೆ, ಕರಿಯ ಗೌಡ ನಾರ್ಯ, ಸತೀಶ್ ಉಡುಪಿ ದೊಂಡೋಲೆ, ಸಂತೋಷ್ ಕಲ್ಲೂರಾಯ, ದೊಂಡೋಲೆ, ಪ್ರಕಾಶ್ ಕೆಡ್ಲ ಉಜಿರೆ, ಮನೋಜ್ ಭಟ್ ಸಾಗರ್ ಪಾವರ್ ದೊಂಡೋಲೆ, ಚಂದ್ರನಾಥ ಜೈನ್ ದೊಂಡೋಲೆ ಇವರೆಲ್ಲ ಮಾರ್ಗದರ್ಶನದಿಂದ ಬಡ ಮತ್ತು ಮಧ್ಯಮವರ್ಗದ ಜನರಿಗೆ ಮನೆ ಮನೆಗೆ ತಲುಪಿಸುವ ಪಾತ್ರವು ಇದರಲ್ಲಿ ಪ್ರಮುಖವಾಗಿದೆ.
ಇದಕ್ಕೆ ಅನೇಕ ದಿನಗಳಿಂದ ಸಹಕರಿಸುತ್ತ ಬಂದಿರುವ ನಿಶಾನ್ ಬಂಗೇರ ನಾರ್ಯ, ಸುಧಾಕರ್ ನಿಸರ್ಗ ನಿಲಯ ನಾರ್ಯ, ಸತೀಶ್ ನಿಸರ್ಗ ನಿಲಯ ನಾರ್ಯ, ಚಂದ್ರ ಶೆಟ್ಟಿ ನಾರ್ಯ, ಹರೀಶ್ ನಾರ್ಯ, ಮನೋಹರ್ ದೊಂಡೋಲೆ ಸಂತೋಷ್ ಶೆಟ್ಟಿ ದೊಂಡೋಲೆ, ಮಧುಕರ್ ದೊಂಡೋಲೆ ನಿತಿನ್ ದೊಂಡೋಲೆ, ಜಗ್ಗಣ್ಣ ಕುರ್ಮಾಣಿ, ಅವಿನಾಶ್ ಕುರ್ಮಾಣಿ ಮತ್ತಿತರರು ಸಹಕರಿಸಿದರು.