ಜಯ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಸುರೇಂದ್ರನಾಥ ಆಳ್ವ ನಿಧನ
ಪುತ್ತೂರು: ಜಯ ಕರ್ನಾಟಕ ರಾಜ್ಯ ಉಪಾಧ್ಯಕ್ಷ, ವಿಜಯಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಕುರಿಯ ಮಾಡಾವು ಏಳ್ನಾಡುಗುತ್ತು ಸುರೇಂದ್ರನಾಥ ಆಳ್ವ(69ವ)ರವರು ಹೃದಯಾಘಾತದಿಂದಾಗಿ ಏ.18ರಂದು ಸಂಜೆ ಮಂಗಳೂರು ಫಾದರ್‌ಮುಲ್ಲಾರ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಜಯಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿದ್ದರು.
ವಿಜಯಾ ಬ್ಯಾಂಕ್ ವ್ಯವಸ್ಥಾಪಕರಾಗಿ ವಿವಿಧ ಶಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು ಉದನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಸೇವಾ ನಿವೃತ್ತಿ ಹೊಂದಿದ್ದರು.
ಮೃತರು ಪತ್ನಿ ನಿರೂಪ ಎಸ್.ಆಳ್ವ, ಪುತ್ರಿ ಶಿಲ್ಪಾ ಆಳ್ವ, ಮೊಮ್ಮಗಳು ಮೇಧಾ ಆಳ್ವ, ಸಹೋದರ ಯತೀಶ್ ಆಳ್ವ, ಸಹೋದರಿಯರಾದ ನಳಿನಿ ಎಮ್.ಆಳ್ವ, ರತಿ ಎನ್ ಆಳ್ವ, ಸತಿ ಹೆಗ್ಡೆ ಅವರನ್ನು ಅಗಲಿದ್ದಾರೆ.
Comments are closed.