ಸಬಳೂರು | ಬಿಜೆಪಿ ಬೂತ್ ಸಮಿತಿಯಿಂದ ಕಿಟ್ ವಿತರಣೆ

Share the Article

ಕಡಬ ತಾಲೂಕು ಕೊಯಿಲ ಗ್ರಾಮದ ಸಬಳೂರು ಬಿಜೆಪಿ ಬೂತ್ ಸಮಿತಿಯಿಂದ ಲಾಕ್ ಡೌನ್ ಹಿನ್ನೆಲೆ ಕಂಗೆಟ್ಟ ಕುಟುಂಬಗಳಿಗೆ ಕಿಟ್ ವಿತರಣೆ ಶುಕ್ರವಾರ ನಡೆಯಿತು.

ಸಬಳೂರು ಪರಿಸರದ ಸೀಗೆತ್ತಡಿ‌,ನೀಡೇಲು,ಸಬಳೂರು , ಬುಡಲೂರು,ಕುದುಲೂರು ಮೊದಲಾದ ಪ್ರದೇಶದ ಅಯ್ದ 35 ಕುಟುಂಬಗಳಿಗೆ ದಾನಿಗಳಿಂದ ಸಂಗ್ರಹಿಸಿದ ಮೊತ್ತದಲ್ಲಿ ಕಿಟ್ ವಿತರಿಸಲಾಯಿತು.

ಕೊಯಿಲ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ರಾಮಚಂದ್ರ ನಾಯ್ಕ, ಸಬಳೂರು ಬೂತ್ ಸಮಿತಿ‌‌ ಅಧ್ಯಕ್ಷ ಉಮೇಶ್ ಸಂಕೇಶ, ಕಾರ್ಯದರ್ಶಿ ಚಿದಾನಂದ ಪಾನ್ಯಲು, ಸದಸ್ಯ ಉದಯ ಏಣಿತ್ತಡ್ಕ, ಕೊಯಿಲ ಗ್ರಾಮ ಪಂಚಾಯಿತಿ ಸದಸ್ಯರಾದ ಸುಂದರ ನಾಯ್ಕ ಚೆಕ್ಕಿತ್ತಡ್ಕ, ತಿಮ್ಮಪ್ಪ ಗೌಡ ಮೊದಲಾದವರು ಇದ್ದರು

Comments are closed.