ಪುತ್ತೂರಿನ ದೃಶ್ಯಗಳು | ಬ್ಯಾಂಕ್ ಖಾತೆಗೆ ಜನ್ ಧನ್ ಮೊತ್ತ | ಬ್ಯಾಂಕ್ ಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರ ಸರದಿ
ಪುತ್ತೂರು, ಏಪ್ರಿಲ್ 13 : ಕೋರೋನಾ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಲಾಕ್ ಡೌನ್ ಮುಂದುವರಿದಿದೆ. ಪುತ್ತೂರು ನಗರದಾದ್ಯಂತ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೆ ತರಲಾಗಿದೆ. ಅಗತ್ಯ ಸಾಮಾಗ್ರಿಗಳು ಹೊಂದಿರುವ ಅಂಗಡಿ-ಮುಂಗಟ್ಟುಗಳು ತೆರೆದಿದ್ದು, ಉಳಿದ ಅಂಗಡಿಗಳು ಬಾಗಿಲು ಮುಚ್ಚಿದೆ. ಖಾಸಗಿ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿಶೇಧಿಸಲಾಗಿದ್ದು, ಕಾನೂನು ಮೀರಿ ರಸ್ತೆಗಿಳಿಯುವ ವಾಹನಗಳನ್ನು ಪೋಲೀಸರು ಮುಟ್ಟುಗೋಲು ಹಾಕುತ್ತಿರುವ ದೃಶ್ಯ ಎಲ್ಲೆಡೆ ಕಂಡುಬಂದಿದೆ.
ಬ್ಯಾಂಕ್ ಖಾತೆಗೆ ಜನ್ ಧನ್ ಮೊತ್ತ ಜಮಾವಣೆಯಾದ ಹಿನ್ನೆಲೆಯಲ್ಲಿ ಬ್ಯಾಂಕ್ ಗಳ ಮುಂದೆ ಜನರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಪುತ್ತೂರಿನಲ್ಲಿ ಕಂಡುಬರುತ್ತಿತ್ತು,
ಇಂದಿನಿಂದ ಅಡಿಕೆ ಉತ್ಪನ್ನ ಗಳ ಮಾರುಕಟ್ಟೆ ಕ್ಯಾಂಪ್ಕೋ ದಲ್ಲಿ ದಿನವೊಂದಕ್ಕೆ ಫೋನ್ ಮೂಲಕ ಟೋಕನ್ ತೆಗೆದುಕೊಂಡ 20 ಗ್ರಾಹಕರಿಗೆ ಗರಿಷ್ಠ 25 ಸಾವಿರ ರೂಪಾಯಿಯ ಅಡಿಕೆ ಮಾರಾಟ ಮಾಡುವ ವ್ಯವಸ್ಥೆ ಆರಂಭಗೊಂಡಿದೆ.