ನಿತ್ಯ‌ ದುಡಿಯುವ ಕಾರ್ಮಿಕರಿಗೆ ನೆರವು ನೀಡಿದ ಆಳ್ವ ಫಾರ್ಮ್ಸ್ ಕುಟುಂಬ

ಸುಳ್ಯ : ಕೊರೊನಾ ಮಹಾಮಾರಿ ಲೌಕ್ ಡೌನ್ ನಿಂದ ಬಡ ಜನರು ಸಂಕಷ್ಟದಲ್ಲಿದ್ದು, ಈ  ಸಂದರ್ಭದಲ್ಲಿ ತನ್ನ ಮನೆಗೆ ನಿತ್ಯ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಅಗತ್ಯ ವಸ್ತುಗಳ ಆಹಾರ್ ಕಿಟ್ ಹಾಗೂ ಆರ್ಥಿಕ ನೆರವು ನೀಡುವ ಕಾರ್ಯಚಟುವಟಿಕೆ ಪೆರುವಾಜೆ ಗ್ರಾಮದ ಮುಕ್ಕೂರು ಬೋಳಕುಮೇರಿನ ಆಳ್ವಪಾರ್ಮ್ಸ್ ನಲ್ಲಿ ಎ. 12 ರಂದು ನಡೆಯಿತು.

12 ಕ್ಕೂ ಅಧಿಕ ಮಂದಿಗೆ ಆಳ್ವ ಪಾರ್ಮ್ಸ್ ಯಜಮಾನಿ ಲಲಿತಾ ಎಸ್ ಆಳ್ವ ಅವರು ಕಿಟ್ ವಿತರಿಸಿ ಚಾಲನೆ ನೀಡಿದರು. 

ಪ್ರಸ್ತಾವನೆಗೈದ ಆಳ್ವಪಾರ್ಮ್ಸ್ ನ ಕುಂಬ್ರ ದಯಾಕರ ಆಳ್ವ ಅವರು, ದುಡಿಯುವ ವರ್ಗ ಸಂಕಷ್ಟದಲ್ಲಿ ಇರುವ ಸಂದರ್ಭದಲ್ಲಿ ಅವರ‌‌ ನೆರವಿಗೆ ನಿಲ್ಲುವುದು ನಮ್ಮ ಧರ್ಮ. ಹಲವು ದಶಕಗಳಿಂದ ದುಡಿಯುತ್ತಿರುವ ಕುಟುಂಬಗಳಿಗೆ ನಮ್ಮಿಂದಾದ ಸಹಕಾರ ‌ನೀಡಿದ್ದೇವೆ. ಕಷ್ಟ ಕಾಲದಲ್ಲಿ ಕೂಡ ಅವರ‌ನ್ನು ಕೈ ಬಿಡುವುದಿಲ್ಲ‌ ಎಂದರು.

ಪೆರುವಾಜೆ ಗ್ರಾ.ಪಂ.ಸದಸ್ಯ ಉಮೇಶ್ ಕೆಎಂಬಿ ಕಿಟ್ ವಿತರಿಸಿ ಮಾತನಾಡಿ, ನಿತ್ಯವು ಮನೆ, ಕೃಷಿಭೂಮಿಯಲ್ಲಿ ಶ್ರಮ ಧಾರೆ ಎರೆಯುವ ಕಾರ್ಮಿಕರನ್ನು ಕಷ್ಟಕಾಲದಲ್ಲಿ ಸ್ಮರಿಸಿ ಅವರಿಗೆ ನೆರವಾಗುವ ವಿಶೇಷ ಪ್ರಯತ್ನ ಇಲ್ಲಿ‌ ನಡೆದಿದೆ.‌ ಆ ಮೂಲಕ‌ ಈ ಕುಟುಂಬಗಳಿಗೂ ಆತ್ಮಸ್ಥೆರ್ಯ ತುಂಬಿದಂತಾಗಿದೆ. ಎಲ್ಲ ಕಡೆಗಳಲ್ಲಿ ಆರ್ಥಿಕವಾಗಿ ಸಾಮರ್ಥ ಇರುವವರು‌ ದುಡಿಯುವ ಕಾರ್ಮಿಕ ವರ್ಗಕ್ಕೆ ‌ನೆರವಾಗುವ ಪ್ರಯತ್ನ ಮಾಡಬೇಕಾದ‌‌ ಸಂದರ್ಭ‌‌ ಇದಾಗಿದೆ ಎಂದರು.

ಪೆರುವೋಡಿ ಶ್ರೀ ವಿಷ್ಣುಮೂರ್ತಿ ‌ದೇವಾಲಯದ ಆಡಳಿತ ‌ಮಂಡಳಿ‌ ಸದಸ್ಯ ಕುಶಾಲಪ್ಪ‌ ಗೌಡ ಪೆರುವಾಜೆ ಮಾತನಾಡಿ ,ಆಳ್ವಪಾರ್ಮ್ಸ್‌ನ‌ ಪ್ರಯತ್ನ ಎಲ್ಲರಿಗೂ‌ ಮಾದರಿಯಾಗಬೇಕಿದೆ. ಇದರಿಂದ ದುಡಿಯುವ ವರ್ಗಕ್ಕೆ ಆಸರೆ‌‌ ಸಿಕ್ಕಂತಾಗುತ್ತದೆ ಎಂದರು.

ನಿವೃತ್ತ ಬ್ಯಾಂಕ್ ಉದ್ಯೋಗಿ ಹೊನ್ನಪ್ಪ ‌ಗೌಡ ಚಾಮುಂಡಿಮೂಲೆ, ಆಳ್ವ ಫಾರ್ಮ್ಸ್ ನ‌ ಶಾಲಿನಿ ದಯಾಕರ ಆಳ್ವ, ದೀಕ್ಷಾ ಆಳ್ವ ಉಪಸ್ಥಿತರಿದ್ದರು.

15 ಆಹಾರ ಸಾಮಗ್ರಿಗಳ‌ ಕಿಟ್

ಆಳ್ವಪಾರ್ಮ್ಸ್ ನ ಕೃಷಿ ಭೂಮಿಯಲ್ಲಿ‌ ಹಲವು ವರ್ಷಗಳಿಂದ ದುಡಿಮೆ ಮಾಡುತ್ತಿರುವ ಹಾಗೂ ಈ ಹಿಂದೆ ದುಡಿದು ಈಗ ವಿಶ್ರಾಂತಿಯಲ್ಲಿರುವ  12 ಕ್ಕೂ ಅಧಿಕ ಕಾರ್ಮಿಕ ಕುಟುಂಬಗಳಿಗೆ 15 ಅಗತ್ಯ ವಸ್ತುಗಳಿರುವ ಆಹಾರ ಕಿಟ್ ಹಾಗೂ ಧನ ಸಹಾಯ ‌ನೀಡಲಾಯಿತು. 

Leave A Reply

Your email address will not be published.