ರಾಮ್ ನಾಮ್ ಸತ್ಯ್ ಹೇ | ಇಂದು ಶ್ರೀ ರಾಮ ನವಮಿ
ಇಂದು ಇಡೀ ಹಿಂದೂ ಧರ್ಮದ ಮಹತ್ವ ಪೂರ್ಣವಾದ ಹಬ್ಬದ ದಿನ. ವಿಷ್ಣುವಿನ ಅವತಾರ ಎಂದೇ ಪುರಾತನ ಗ್ರಂಥಗಳಲ್ಲಿ ಗುರುತಿಸಲ್ಪಟ್ಟಿರುವ ಶ್ರೀರಾಮ ಹುಟ್ಟಿದ ದಿನ. ಯುಗಾದಿಯ ಎಂಟು ದಿನಗಳ ನಂತರ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಆಚರಿಸಲ್ಪಡುವ ಈ ಹಬ್ಬ ಹಿಂದೂ ಧರ್ಮದ ಅತೀ ಮಹತ್ವದ ಹಬ್ಬ. ಶ್ರೀರಾಮನು ವಿಷ್ಣುವಿನ ಏಳನೆಯ ಅವತಾರ. ಶ್ರೀರಾಮ ನವಮಿಯ ಆಚರಣೆ ಸರಳ ಹಾಗೂ ಸುಲಭ ಕೂಡಾ ಹೌದು.
ದೇಶಾದ್ಯಂತ ರಾಮನವಮಿಯನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಅದರಲ್ಲೂ ಉತ್ತರ ಭಾರತದ ಜನರು ರಾಮನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ತುಳಸೀ ದಾಸರ ರಾಮಚರಿತ ಮಾನಸದಲ್ಲಿ ಹೇಳಿರುವಂತೆ ಭಜನೆ, ಕೀರ್ತನೆಗಳು ಮತ್ತು ಮೆರವಣಿಗೆ ಈ ಹಬ್ಬದ ಆಚರಣೆಗಳಾಗಿವೆ. ರಾಮನವಮಿಯಂದು ಸೂರ್ಯ ದೇವನಿಗೆ ಪ್ರಾಥ೯ನೆ ಮಾಡುವುದರೊಂದಿಗೆ ಮುಂಜಾನೆಯೇ ಹಬ್ಬ ಪ್ರಾರಂಭಗೊಳ್ಳುತ್ತದೆ. ಏಕೆಂದರೆ ರಾಮನು ಸೂರ್ಯ ವಂಶಸ್ಥ. ನಮ್ಮ ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಪುನವ೯ಸು ನಕ್ಷತ್ರದಲ್ಲಿ ರಾಮಚಂದ್ರ ಪ್ರಭುವಿನ ಜನನವಾಯಿತು.
“ರಾಮ” ಎಂಬ ಹೆಸರಿನ ಮಹತ್ವ : “ಓಂ ನಮೋ ನಾರಾಯಣ” ಎಂಬ ಒ ಅಷ್ಟಾಕ್ಷರಿ ಮಂತ್ರದಿಂದ ‘ರಾ’ ಎಂಬ ಅಕ್ಷರವನ್ನು ಮತ್ತು “ಓಂ ನಮಃ ಶಿವಾಯ” ಎಂಬ ಪಂಚಾಕ್ಷರಿ ಮಂತ್ರದಿಂದ ‘ಮ’ ಎಂಬ ಅಕ್ಷರ ತೆಗೆದುಕೊಂಡು ವಸಿಷ್ಠರು ರಾಮ ಎಂಬ ಹೆಸರನ್ನು ಇಟ್ಟರು ಎಂಬ ಪ್ರತೀತಿ ಇದೆ. ಭಾರತೀಯರಲ್ಲಿ ರಾಮ ಮತ್ತು ಕೃಷ್ಣ ಆದಶ೯ ಪುರುಷರು.
“ಶ್ರೀರಾಮನು ನಡೆದಂತೆ ನಡೆ ಮತ್ತು ಶ್ರೀ ಕೃಷ್ಣ ನುಡಿದಂತೆ ನಡೆ” ಎಂದು ಹಿರಿಯರು ಹೇಳಿರುವುದು; ಧೈರ್ಯ, ಕತ೯ವ್ಯನಿಷ್ಠೆ, ಮಾತಾಪಿತೃ ವಾಕ್ಯ ಪರಿಪಾಲನೆ, ರಾಜ್ಯಾಡಳಿತ, ಪ್ರಜಾಪರಿಪಾಲನೆ, ಗೌರವ, ಏಕಪತ್ನಿ ವ್ರತ ಸೋದರ ಪ್ರೇಮ ಹೀಗೆ ಅನೇಕ ವಿಚಾರಗಳಲ್ಲಿ ಸವ೯ ಕಾಲಕ್ಕೂ ರಾಮಚರಿತೆ ಅತ್ಯಮೂಲ್ಯ ಕೊಡುಗೆಯಾಗಿದೆ.
ರಾಮನಾಮವನ್ನು ಜಪಿಸಿದರೆ ರಾಮನು ನಮ್ಮನ್ನು ಸದಾ ರಕ್ಷಿಸಿ ಕಾಪಾಡುತ್ತಾನೆ. ರಾಮನ ಧ್ಯಾನಕ್ಕೆ ರಾಮನಾಮ ಬರೆಯುವುದು ಒಂದು ಉತ್ತಮ ಸಾಧನ. ಶಾಂತಿಯ ಸಂಕೇತವಾಗಿರುವ ಈ ಹಬ್ಬ ಎಲ್ಲರಿಗೂ ಶುಭ ತರಲಿ, ದೇಶ ಎದುರಿಸುತ್ತಿರುವ ಕೊರೋನ ಮಹಾಮಾರಿ ಯಿಂದ ಎಲ್ಲರನ್ನೂ ಶ್ರೀರಾಮ ಪಾರು ಮಾಡಲಿ.
ಸರೋಜ ಪಿ.ಜೆ ದೋಳ್ಪಾಡಿ. ಪ್ರಥಮ ಪತ್ರಿಕೋದ್ಯಮ ವಿಭಾಗ, ವಿವೇಕಾನಂದ ಪದವಿ ಕಾಲೇಜು ಪುತ್ತೂರು.