ಅಗತ್ಯ ವಸ್ತುಗಳನ್ನು ಖರೀದಿಸಲು ಸುಳ್ಯದಲ್ಲಿ ಕ್ಯೂ ನಿಂತ ಜನ
ಸುಳ್ಯ: ಕೋರೋನಾ ವೈರಸ್ನಿಂದ ಸುರಕ್ಷತೆಗೆ ದಕ್ಷಿಣ ಕನ್ನಡ ಸಂಪೂರ್ಣ ಬಂದ್ ವ್ಯಾಪಿಸಿದ್ದ ಕಾರಣ ಜನರು ಮನೆಯಿಂದ ಹೊರಬಂದಿಲ್ಲ. ನಿಯತ್ತಾಗಿ ಮನೆಯಲ್ಲಿದ್ದು ಲಾಕ್ ಡೌನ್ ಗೆ ಬೆಂಬಲ ಘೋಷಿಸಿದ್ದರು. ಹಾಗಾಗಿ ಮನೆಯಲ್ಲಿಯೆ ಇದ್ದ ಕಾರಣ ಅಗತ್ಯ ವಸ್ತುಗಳ ಖರೀದಿಗೆ ಆಗಿರಲಿಲ್ಲ.
ಇವತ್ತು ಲಾಕ್ ಡೌನ್ ಮುಂಜಾನೆ 8 ಗಂಟೆಯಿಂದ 3 ಗಂಟೆಯವರೆಗೆ ಸಡಿಲಿಕೆ ಇರುವುದರಿಂದ ಸುಳ್ಯದ ಜನತೆ ಸ್ವಲ್ಪ ನಿರಾಳ. ಕೈಯಲ್ಲಿ ದೊಡ್ಡ ಚೀಲ ಹಿಡಿದುಕೊಂಡು ಹೊರಬಂದಿದ್ದಾರೆ. ಎಲ್ಲರಲ್ಲೂ ಬೇಗ ಬೇಗ ಸಾಮಾನು ಖರೀದಿಸುವ ತವಕ.
ಹಾಗಾಗಿ, ಅಗತ್ಯವಸ್ತುಗಳ ಖರೀದಿಸಲು ಸುಳ್ಯದ ದಿನಸಿ ಅಂಗಡಿಗಳಲ್ಲಿ ಮುಂಜಾನೆಯಿಂದಲೇ ನಿಂತಿರುವ ಜನರ ದೊಡ್ಡ ಸಾಲು ಕಾಣುತ್ತಿದೆ. ಕೆಲವು ಕಡೆ ಸಾಮಾಜಿಕ ಅಂತರ ಒಂದು ಮೀಟರ್ ದೂರ ಇಟ್ಟುಕೊಂಡು ಜನರು ನಿಂತಿದ್ದರೆ, ಮತ್ತೆ ಕೆಲವೆಡೆ ಒಟ್ರಾಸಿ ನಿಂತಿದ್ದಾರೆ. ಪೊಲೀಸರು ಈಗ ಹಾಗೆ ಸಾಮಾಜಿಕ ಅಂತರ ಇಟ್ಟುಕೊಳ್ಳದೆ ನಿಂತ ಜನರನ್ನು ಸರಿಯಾಗಿ ನಿಲ್ಲಲು ಹೇಳುತ್ತಿದ್ದಾರೆ.
ನಗರದ ಎಲ್ಲೆಡೆ ವಾಹನಗಳು ರಸ್ತೆಗೆ ಇಳಿದಿದ್ದು ಸುಳ್ಯ ಪಟ್ಟಣದ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.