ಅಗತ್ಯ ವಸ್ತುಗಳ ಖರೀದಿಗೆ ಅವಕಾಶ | ಬೆಳ್ಳಾರೆ ಪೇಟೆಯಲ್ಲಿ ಫುಲ್ ರಶ್

ಸುಳ್ಯ : ಕಳೆದ ಮೂರು ದಿನಗಳಿಂದ ಜಿಲ್ಲೆ ಪೂರ್ಣ ಬಂದ್ ಆದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಂಥ ಬೆಳಗ್ಗೆ 6 ರಿಂದ ಮಧ್ಯಾಹ್ನ3 ರವರೆಗೆ ಅಗತ್ಯ ಸಾಮಾಗ್ರಿ ಖರೀದಿಗೆ ಅವಕಾಶ ಮಾಡಿದ್ದರಿಂದ ಬೆಳ್ಳಾರೆ ಪೇಟೆಯಲ್ಲಿ ಫುಲ್ ರಶ್ ಕಂಡು ಬಂತು. ಬೆಳ್ಳಾರೆ ಪೇಟೆಯಲ್ಲಿ ಟ್ರಾಫಿಕ್ ಜಾಮ್ ಆಗುವಷ್ಟು ವಾಹನ ದಟ್ಟಣೆ ಕಂಡು ಬಂದಿದೆ.

ಅವಶ್ಯಕ ಸಾಮಗ್ರಿಗಳನ್ನು ಕೊಳ್ಳಲು ಜನ ಭಾರಿ ಸಂಖ್ಯೆಯಲ್ಲಿ ಪೇಟೆ ಗೆ ಸಾರ್ವಜನಿಕರು ಬಂದ ಪರಿಣಾಮ ಫುಲ್ ರಶ್ ಕಂಡು ಬಂದಿದೆ. ದಿನಸಿ ಅಂಗಡಿ, ತರಕಾರಿ ಅಂಗಡಿ, ಮೆಡಿಕಲ್, ಹಾಲಿನ ಅಂಗಡಿ, ಮಾಂಸದ ಅಂಗಡಿಗಳ, ಪೆಟ್ರೋಲ್ ಬಂಕ್ ಮುಂದೆಯೂ ಸಾಲು ಸಾಲು ಉದ್ದದ ಕ್ಯೂ ಇತ್ತು.

ಸಾಮಾಜಿಕ ಅಂತರ ಪಾಲನೆಗೆ ಬೆಳ್ಳಾರೆ ಗ್ರಾ.ಪಂ.ಕಾರ್ಯಪಡೆಯವರು ವ್ಯವಸ್ಥೆ ಮಾಡಿದರು.ಇದರಿಂದಾಗಿ ದಿನಸಿ ಅಂಗಡಿಗಳಲ್ಲಿ ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ಸಾರ್ವಜನಿಕರು ನಿಂತಿದ್ದಾರೆ.

ಕೋರೋನಾ ಸೋಂಕಿತರ ಸುಶ್ರೂಷೆಗೈದ ನರ್ಸ್ ಗೆ ವೈರಸ್ ಸೋಂಕು | ಗುಣಮುಖರಾದ 93 ವರ್ಷದ ವೃದ್ಧ ದಂಪತಿ

ಬೆಳ್ಳಾರೆಯಲ್ಲಿ ಗ್ರಾ.ಪಂ.ನಿಂದ ಮಾಡಿದ ಕೊರೊನಾ ವಾರಿಯರ್ಸ್ ತಂಡ ಉತ್ತಮ ಕಾರ್ಯ ಮಾಡುವ ಮೂಲಕ ಮಾದರಿಯಾಗಿದೆ. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಧನಂಜಯ ಕೆ‌.ಆರ್ ಹಾಗೂ ಆಡಳಿತ ಮಂಡಳಿಯ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ಪಂಜ ಪೇಟೆಯಲ್ಲಿ……

Leave A Reply

Your email address will not be published.