ಸೋಮವಾರವೂ ದ.ಕ. ಜಿಲ್ಲೆಯಲ್ಲಿ ಸಂಪೂರ್ಣ ಬಂದ್ | ಮಂಗಳವಾರ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ

Share the Article

ಮಂಗಳೂರು : ಕೊರೋನ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆ ಸೋಮವಾರವೂ ಸಂಪೂರ್ಣ ಬಂದ್ ಆಗಲಿದೆ.

ತುರ್ತು ಸೇವೆಗಳಾದ ಹಾಲು ವಿತರಣೆ, ಮೆಡಿಕಲ್, ಪತ್ರಿಕೆ, ಪೆಟ್ರೋಲ್ ಬಂಕ್‌, ಅಡುಗೆ ಅನಿಲ ವಿತರಣೆಗೆ ವಿನಾಯಿತಿ ನೀಡಲಾಗಿದೆ.

ಮಂಗಳವಾರ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲಾಗಿದೆ. ಮಂಗಳವಾರ ಬೆಳಿಗ್ಗೆ 6 ರಿಂದ ಸಂಜೆ 3 ರವರೆಗೆ ತರಕಾರಿ ಅಂಗಡಿಗಳು ತೆರೆದಿರಲಿವೆ ಎಂದು ಜಿಲ್ಲಾ ಉಸ್ತುವಾರಿ ಮತ್ರಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾಧ್ಯಕ್ಷರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

Leave A Reply