Breaking News | ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಗೆ ಕೊರೋನಾ !
ಲಂಡನ್, ಮಾ. 27 : ಕೊರೋನಾ ರೋಗವು ಬ್ರಿಟಿಷ್ ಪ್ರಧಾನಿ ಜಾನ್ಸನ್ ಅವರಿಗೂ ವಕ್ಕರಿಸಿಕೊಳ್ಳುವುದರ ಮೂಲಕ, ಈ ರೋಗ ಯಾರನ್ನೂ ಬಿಡುವುದಿಲ್ಲವೆಂದು ಮತ್ತೊಮ್ಮೆ ಲೋಕಕ್ಕೆ ಸಾಬೀತುಮಾಡಿದೆ.
” ಕಳೆದ 24 ಗಂಟೆಗಳಲ್ಲಿ ನಾನು ಸೌಮ್ಯ ರೋಗ ಲಕ್ಷಣಗಳನ್ನು ಗುರುತಿಸಿದೆ ಮತ್ತು ಕೂಡಲೇ ಕೊರೋನಾ ವೈರಸ್ ಗೆ ಪರೀಕ್ಷೆ ಮಾಡಿಸಿದಾಗ ಅದು ಪಾಸಿಟಿವ್ ಬಂತು ” ಎಂದು ಜಾನ್ಸನ್ ಹೇಳಿದರು.
” ಈಗ ನಾನು ಸ್ವಯಂ-ಪ್ರತ್ಯೇಕವಾಗಿದ್ದೇನೆ, ಆದರೆ ನಾವು ಈ ವೈರಸ್ ವಿರುದ್ಧ ಹೋರಾಡುತ್ತಲೇ, ವೀಡಿಯೊ-ಕಾನ್ಫರೆನ್ಸ್ ಮೂಲಕ ಸರ್ಕಾರವನ್ನು ಮುನ್ನಡೆಸುತ್ತೇನೆ.” ಎಂದವರು ಹೇಳಿದರು.
ನನಗೆ ಬರಲ್ಲ, ನಮ್ಮೂರಲ್ಲಿ ಇಲ್ಲ, ಅಂಗಡಿಗೆ ಹೋದ್ರೆ ಬರುತ್ತಾ? ಅಂತ ಬೇಕಾಬಿಟ್ಟಿ ಇದ್ದವರು ಇನ್ನಾದರೂ ಜಾಗ್ರತರಾಗಬೇಕು. ಈಗ ದೇಶವೊಬ್ಬರ ಪ್ರಧಾನಿಗೇ ಬಂದುಬಿಟ್ಟಿದೆ. ದೂರ ನಿಂತು ಮಾತಾಡುವ, ಸದಾ ಒಳ್ಳೆಯ ವಾತಾವರಣದಲ್ಲಿರುವ ಪ್ರಧಾನಿಯಂತವರಿಗೇ ಬಂದುಬಿಟ್ಟರೆ, ನಮ್ಮ ನಿಮ್ಮಂತಹಾ ಸಾಮಾನ್ಯರ ಗತಿ ಏನು ? ಸರಕಾರ ಹೇಳಿದಂತೆ ಮನೆಯಲ್ಲಿಯೇ ಇರಬೇಕು. ಇರೋಣ. ಎಲ್ಲ ಸರಿಯಾಗುತ್ತದೆ.