ಅಂಗಡಿಗಳಲ್ಲೂ ಸಾಮಾಜಿಕ ಅಂತರ | ಕೊರೋನಾ ವಿರುದ್ಧ ಹೋರಾಟದಲ್ಲಿ ಇದೂ ಮುಖ್ಯ

ಕೊರೂನಾ ವಿರುದ್ದದ ಹೋರಾಟದಲ್ಲಿ ಸರಕಾರದ ಜತೆ ಜನಸಾಮಾನ್ಯರು ಮತ್ತು ವ್ಯಾಪಾರಿ ವರ್ಗ ಸಹಕರಿಸುತ್ತಿಲ್ಲ ಎಂಬ ಕೂಗಿನ ನಡುವೆ ಕೂಡ ನಿಯಮಗಳನ್ನು ಶಿಸ್ತಾಗಿ ಪಾಲಿಸುವ ಜನರು ಕೂಡಾ ನಮ್ಮಲ್ಲಿದ್ದಾರೆ. ಅಂತಹ ಕೆಲವು ಸ್ಯಾಂಪಲ್ ಗಳು ನಾವು ನಿಮಗೆ ತೋರಿಸುತ್ತೇವೆ.

ಪುತ್ತೂರಿನ ಹೃದಯ ಮಂಜಲ್ಪಡ್ಪುನಲ್ಲಿರುವ ಮಂಗಲ್ ಸ್ಟೋರ್ ನವರು ಶಿಸ್ತು ಪಾಲಿಸಿಕೊಂಡೂ ಭರ್ಜರಿ ವ್ಯಾಪಾರ ಮಾಡಿಕೊಂಡಿದ್ದಾರೆ. ಸಾಮಾಜಿಕ ಅಂತರವನ್ನು ಕಾಪಾಡುವಲ್ಲಿ ಯಶಸ್ವಿ ಆದ ಪುತ್ತೂರಿನ ಸೂಪರ್ ಮಾರ್ಕೆಟ್ ಮಂಗಲ್ ಸ್ಟೋರ್ ನ ಮಾಲೀಕರಿಗೂ, ಮ್ಯಾನೇಜರ್ ಗಳಿಗೆ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಮತ್ತು ಶ್ರೀ ರಾಘವೇಂದ್ರ ನಾಯಕ್ ರವರಿಗೆ ವಂದನೆಗಳು.

ಅದೇ ರೀತಿ ಕಡಬದ ಯಶೋಧಾ ಸೂಪರ್ ಶಾಪ್ ನವರಿಂದಲೂ ಇಂತದ್ದೇ ಸೂಪರ್ ಶಿಸ್ತು ಕಾಣಸಿಕ್ಕಿದೆ.

ಮೂರನೆಯ ವ್ಯಕ್ತಿ ಮನೆ ಮನೆಗೆ ಪಡಿತರ ವಿತರಿಸುವ ಸುಳ್ಯದ ನ.ಪಂ ಸದಸ್ಯ ರಿಯಾಝ್

ದೇಶಾದ್ಯಂತ ಲೋಕ್ ಡೌನ್ ಮಾಡಿದ ಈ ಸಂದರ್ಭದಲ್ಲಿ ತನ್ನ ವಾರ್ಡೀನ ಸದಸ್ಯರಿಗೆ ಅವಶ್ಯಕ ಸಾಮಗ್ರಿಗಳಿಗೆ ಯಾವುದೆ ಕೊರತೆಯಾದರೆ, ಆ ಕೂಡಲೆ ಸಾಮಾನುಗಳನ್ನು ಮನೆ ಬಾಗಿಲಿಗೆ ತಲುಪಿಸಿ ಕೊಡುತ್ತಾರೆ.

ಇವು ಕೆಲವು ಸ್ಯಾಂಪಲ್ ಅಷ್ಟೇ. ಇವರಷ್ಟೇ ನಿಮ್ಮ ಊರಿನಲ್ಲೂ ಕೆಲವು ಹೀರೋಗಳು ಇರಬಹುದು. ಅವರಿಗೂ ಒಂದು ಅಭಿನಂದನೆ.

  • ಹಾರಾಡಿ ಅಬ್ದುಲ್ ರಝಕ್ , ಪುತ್ತೂರು

Leave A Reply

Your email address will not be published.