ಕೊಡಿಂಗೇರಿ | ಫಲ್ಗುಣಿ ನದಿಯಲ್ಲಿ ಆಕಸ್ಮಿಕವಾಗಿ ಬಿದ್ದು ಇಬ್ಬರ ದುರಂತ ಸಾವು

ಹೊಸಂಗಡಿ : ಫಲ್ಗುಣಿ ನದಿಯಲ್ಲಿ ಆಕಸ್ಮಿಕವಾಗಿ ಬಿದ್ದು ಇಬ್ಬರು ಮರಣಹೊಂದಿದ ಘಟನೆ ಕೊಡಿಂಗೇರಿ ಎಂಬಲ್ಲಿ ನಡೆದಿದೆ. ಶಿರ್ತಾಡಿಯ ಪಣಪಿಲ ದರ್ಖಾಸಿನ ಮಹಾಬಲ ಪೂಜಾರಿಯ ಪುತ್ರ ವಾಸುದೇವ (22) ಮತ್ತು ಕೊಣಾಜೆಯ ಕೊಡಿಂಜೆ ನಿವಾಸಿ ಸಾಧು ಪೂಜಾರಿಯವರ ಪುತ್ರ ಇಶಾನ್ (8) ದುರಂತವಾಗಿ ಸಾವನ್ನಪ್ಪಿದವರು.

ಈ ಇಬ್ಬರೂ ರಜೆ ಇರುವ ಕಾರಣದಿಂದ ಹೊಸಂಗಡಿಯ ಸುನಿಲ್ ಎಂಬವರ ಮನೆಗೆ ನೆಂಟರಾಗಿ ಬಂದಿದ್ದರು. ಬೆಳಿಗ್ಗೆ ಎದ್ದು ದನಗಳಿಗೆ ಹುಲ್ಲು ತರಲು ತೋಟಕ್ಕೆ ತೆರಳಿದ್ದರು. ಹುಡುಗರು ಮನೆಯಲ್ಲೇ ಇರಲು ಬೇಜಾರಾಗಿ ತೋಟಕ್ಕೆಂದು ತೆರಳಿದ್ದರು. ಹಾಗೆ ಹೋದವರು ಬಹು ಹೊತ್ತಿನವರೆಗೂ ವಾಪಸ್ಸು ಮನೆಗೆ ಬಾರದೆ ಹೋದಾಗ ಅವರನ್ನು ಹುಡುಕಿಕೊಂಡು ಸುನಿಲ್ ಅವರು ಹೊರಟಿದ್ದಾರೆ. ಆಗ ಅವರಿಗೆ ಈ ಇಬ್ಬರ ಮೃತ ದೇಹಗಳು ಕಾಣಿಸಿದೆ. ಸುನಿಲ್ ಅವರ ತೋಟಕ್ಕೆ ಒತ್ತಿಕೊಂಡೇ ಪಲ್ಗುಣಿ ನದಿ ಹರಿಯುತ್ತಿದ್ದು, ನದಿ ಬದಿಯಲ್ಲೇ ಇರುವ ಬಂಡೆಯ ಕೆಳಗಡೆ ಆ ಇಬ್ಬರ ಶವಗಳೂ ಬಂಡೆಯಿಂದ ನದಿಗೆ ಬಿದ್ದಂತೆ ಕಾಣಿಸುತಿತ್ತು.

ಅವರಿಬ್ಬರೂ ಆ ಬಂಡಿಯಿಂದ ಕಾಲು ಜಾರಿ ಕೆಳಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ವೇಣೂರು ಪೊಲೀಸರು ಆಗಮಿಸಿದ್ದು ತನಿಖೆ ನಡೆದಿದೆ.

Leave A Reply

Your email address will not be published.