ಚೈತ್ರಮಾಸದ ಮೊದಲ ದಿನ | ಪ್ರಕೃತಿ ಹಬ್ಬಯುಗಾದಿ
ಜೀವ ಪ್ರೀತಿಗೆ ಮೂಲ…ಪ್ರೀತಿ ಆಸೆಗೆ ಮೂಲ… ಆಸೆ ದುಃಖಕ್ಕೆ ಮೂಲ… ದುಃಖ ಬಾಳಿಗೆ ಮೂಲ… ಬಾಳಿಗೆ ಭೇದವಿಲ್ಲ ಬೇವು ಬೆಲ್ಲ ತಿನ್ನದೆ ಬಾಳೆ ಇಲ್ಲ… ಯುಗಾದಿ ಹಬ್ಬವನ್ನು ಚೈತ್ರಮಾಸದ ಮೊದಲ ದಿನ ಭಾರತದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತೇವೆ. ಸಂಕ್ರಾಂತಿಯ ನಂತರ ಮೊದಲ ಅಮಾವಾಸ್ಯೆ ಮುಗಿದು ಆಗಸದಲ್ಲಿ ಚಂದ್ರ ಮೂಡಿದಾಗ ಆರಂಭವಾಗುವುದೇ ಹೊಸ ವರ್ಷ ಅದುವೇ ಚಂದ್ರಮಾನ ಯುಗಾದಿ. ಯುಗಾದಿ ಪ್ರಕೃತಿಗೆ ಒಂದು ರೀತಿ ಸಂತಸದ ಕಾಲ .
ಪರಿಸರದಲ್ಲಿ ಮರ-ಗಿಡಗಳು ಚಿಗುರೊಡೆದು ಕಂಗೊಳಿಸುವ ಕಾಲ. ಪ್ರಕೃತಿಯು ಹಸಿರು ಸೀರೆಯನುಟ್ಟಂತೆ ಕಾಣುವ ಸವಿಗಾಲ. ಖಗ ಮೃಗಗಳು ಹೊಸ ಚೈತನ್ಯದೊಂದಿಗೆ ಸಂಭ್ರಮಿಸುವ ಕಾಲ. ಯುಗಾದಿ ಎನ್ನುವ ಪದ ಸಂಸ್ಕೃತ ಭಾಷೆಯ ಯುಗ ಮತ್ತು ಆದಿ ಎಂಬ ಪದಗಳಿಂದ ಬಂದಿದೆ. ಸಂಸ್ಕೃತದಲ್ಲಿ ಯುಗ ಎಂದರೆ ವರ್ಷ ಆದಿ ಎಂದರೆ ಆರಂಭ ಎಂದು ಅರ್ಥ. ಯುಗಾದಿ ಹಬ್ಬದ ವಿಶೇಷತೆಗಳು
ಎಣ್ಣೆ ಸ್ಥಾನ
ಯುಗಾದಿ ಹಬ್ಬದ ದಿನ ಎಣ್ಣೆ ಸ್ನಾನ ಮಾಡಿ ಕುಟುಂಬಸ್ಥರ ಎಲ್ಲರೂ ಸೇರಿ ಪೂಜೆ ಮುಗಿಸಿದ ನಂತರ ಒಟ್ಟಾಗಿ ಕುಳಿತು ತಯಾರಿಸಿದ ವಿವಿಧ ಬಗೆಯ ಖಾದ್ಯಗಳನ್ನು ಸವಿಯುತ್ತಾರೆ.
ಬೇವು ಬೆಲ್ಲ
ಬೇವು ಬೆಲ್ಲ ಯುಗಾದಿ ಹಬ್ಬದ ಮತ್ತೊಂದು ವಿಶೇಷ . ಇದು ಸಿಹಿ ಮತ್ತು ಕಹಿ ಮಿಶ್ರಣ. ನಮ್ಮ ಜೀವನದಲ್ಲಿ ಬರುವ ಕಷ್ಟ-ಸುಖಗಳನ್ನು ಇದು ಪ್ರತಿನಿಧಿಸುತ್ತವೆ. ನಮ್ಮ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಎಷ್ಟೇ ಸುಖ ಬಂದರೂ ಅದನ್ನು ಕೂಡ ಒಂದೇ ಒಂದು ಸಲ ಕಾಣಬೇಕು. ಕಷ್ಟ ಬಂದಾಗ ಜೀವನದಲ್ಲಿ ಕುಗ್ಗದೆ ಸುಖ ಬಂದಾಗ ಜೀವನದಲ್ಲಿ ಹೀಗೆ ಒಂದೇ ರೀತಿಯಲ್ಲಿ ಕಂಡಾಗ ಮಾತ್ರ ನಮ್ಮ ಬಾಳು ಬಂಗಾರವಾಗುತ್ತದೆ. ಹೀಗೆ ವಿಶೇಷತೆಯಿಂದ ಕೂಡಿರುವ ಯುಗಾದಿ ಹಬ್ಬದ ಸಂದರ್ಭದಲ್ಲಿ ಒಬ್ಬಟ್ಟು, ಹೋಳಿಗೆ, ಕಬ್ಬಿನ ಹಾಲಿನ ಪಾಯಸ ಈ ಹಬ್ಬದ ವಿಶೇಷ ಖಾದ್ಯಗಳಾಗಿವೆ. ನಾವೆಲ್ಲರೂ ಯುಗಾದಿ ಹಬ್ಬವನ್ನು ಸಂಸ್ಕೃತಿ ಬದ್ಧವಾಗಿ ಆಚರಿಸಿದಾಗ ಮಾತ್ರ ಈ ಹಬ್ಬ ಅರ್ಥಪೂರ್ಣವಾಗುತ್ತದೆ.
ಲೇಖನ : ಸಂದೀಪ್ ಎಸ್. ಮಂಚಿಕಟ್ಟೆ, ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು, ಪುತ್ತೂರು.