ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್, ಆಧಾರ್ -ಪಾನ್ ನಂಬರ್ ಲಿಂಕ್ ಮಾಡುವ ದಿನಾಕ ಗಡುವು ವಿಸ್ತರಣೆ । 2020 ಜೂನ್ 30 ಕ್ಕೆ ನಿಗದಿ
ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ವಿತ್ತ ವರ್ಷ 2018-2019 ರ ಸಾಲಿಗೆ ನಿಗದಿಯಾಗಿದ್ದ ಗಡುವು ಜೂನ್ 30 ರವರೆಗೆ ವಿಸ್ತರಣೆಯಾಗಿದೆ. ಕೊರೋನಾ ಪೀಡಿದ ರಾಷ್ಟ್ರ ಭಾರತದ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಗಳವಾರ ಈ ವಿಷಯವನ್ನು ಪ್ರಕಟಿಸಿದರು.
ಈ ಹಿಂದೆ ವಿತ್ತ ವರ್ಷ 2018-2019 ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಮಾರ್ಚ್ 31 ಕೊನೆಯ ದಿನವಾಗಿತ್ತು. ಅಷ್ಟೇ ಅಲ್ಲದೆ ರಿಟರ್ನ್ಸ್ ನಲ್ಲಿ ಆಗುವ ತಡಕ್ಕೆ ನಿಗದಿಯಾಗಿದ್ದ 12 % ಬಡ್ಡಿದರವನ್ನು 9 % ಗೆ ಇಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
ಅಷ್ಟೇ ಅಲ್ಲದೆ, TDS ಮೊತ್ತವನ್ನು ಸರಕಾರಕ್ಕೆ ಸಲ್ಲಿಸುವಲ್ಲಿ ತಡವಾದರೆ ಈ ಹಿಂದೆ ಹಾಕುತ್ತಿದ್ದ 18 % ಬಡ್ಡಿಯನ್ನು 9 % ಗೆ ಇಳಿಸಲಾಗಿದೆ.
ಮತ್ತೊಂದು ಪ್ರಮುಖ ಘೋಷಣೆಯಾಗಿ, ಆಧಾರ್ ಮತ್ತು ಪಾನ್ ನಂಬರ್ ಲಿಂಕ್ ಮಾಡುವ ದಿನಾಕವನ್ನೂ ಜೂನ್ 30 ಕ್ಕೆ ವಿಸ್ತರಿಸಲಾಗಿದೆ.ಈ ಹಿಂದೆ ಇದೇ ಮಾರ್ಚ್ 31 ರ ಒಳಗೆ ಪಾನ್ -ಆಧಾರ್ ಲಿಂಕ್ ಮಾಡಲು ಗಡುವು ಕೊಡಲಾಗಿತ್ತು.
ಇನ್ನು ಮುಂದೆ ಎಟಿಎಂ ಗಳಿಂದ ಡೆಬಿಟ್ ಕಾರ್ಡ್ ಬಳಸಿ ವಿದ್ ಡ್ರಾ ಮಾಡುವ ಎಲ್ಲಾ ವ್ಯವಹಾರ ಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಆದರೆ ತೆರಿಗೆ ಫೈಲಿಂಗ್ ನ ದಿನಾಂಕವನ್ನು ಮುಂದೂಡದೆ ಬೇರೆ ದಾರಿಯೇ ಇರಲಿಲ್ಲ. ದೇಶಕ್ಕೆ ದೇಶವೇ ದಿಗ್ಬಂಧನದಲ್ಲಿದ್ದು ದೈನಂದಿನ ಆಹಾರ ಮತ್ತಿತರ ಅಗತ್ಯವಸ್ತುಗಳ ಪೂರೈಕೆಯ ಚಿಂತೆಯಲ್ಲಿರುವಾಗ , ಹೇಗೆ ತಾನೇ ಜನರು ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಿಯಾರು ? ಸಕಾಲಿಕ ನಿರ್ಧಾರ ಪ್ರಕಟಿಸಿದೆ ಸರಕಾರ.