ಕನಕಮಜಲು: ಕೊರೊನಾ ಜಾಗೃತಿ ಕರಪತ್ರ ಬಿಡುಗಡೆ

ಸುಳ್ಯ: ವಿಶ್ವವಿಡೀ ಮನುಷ್ಯರ ಜೀವಕ್ಕೆ ಮಾರಕವೆನಿಸಿರುವ ಹಾಗು ಕೆಲವು ದೇಶಗಳಲ್ಲಿ ಈಗಾಗಲೇ ಸಾವಿರಾರು ಜನರನ್ನು ಬಲಿ ಪಡೆದಿರುವ ಕೊರೊನಾ ವೈರಸ್ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತ್ ಕನಕಮಜಲು ಮತ್ತು ಯುವಜನ ವಿಕಾಸ ಕೇಂದ್ರ ಯುವಕಮಂಡಲ (ರಿ) ಕನಕಮಜಲು ಜಂಟಿಯಾಗಿ ಹಮ್ಮಿಕೊಂಡಿರುವ ಜಾಗೃತಿ ಅಭಿಯಾನದ ಕರಪತ್ರವನ್ನು ಕನಕಮಜಲು ಗ್ರಾ.ಪಂ. ಸಭಾಂಗಣದಲ್ಲಿ ದಿನಾಂಕ 23-03-2020ರಂದು ಬಿಡುಗಡೆಗೊಳಿಸಲಾಯಿತು.

ಕರಪತ್ರವು ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯಲ್ಲಿ ಕಂಡುಬರುವಂತಹ ರೋಗಲಕ್ಷಣಗಳು ಹಾಗು ವೈರಸ್ ಹರಡದಂತೆ ನಾಗರಿಕರು ತೆಗೆಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಗಳನ್ನು ಒಳಗೊಂಡಿದೆ.

ಕಾರ್ಯಕ್ರಮದಲ್ಲಿ ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ಕಜೆಗದ್ದೆ, ಪಂಚಾಯತ್ ಅಧಿಕಾರಿಗಳು ಹಾಗು ಸಿಬ್ಬಂದಿಗಳು, ಯುವಕಮಂಡಲದ ಪದಾಧಿಕಾರಿಗಳು ಹಾಗು ಸದಸ್ಯರುಗಳು ಮತ್ತು ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.

Leave A Reply

Your email address will not be published.