ದಕ್ಷಿಣ ಕನ್ನಡ ಸೇರಿ 9 ಜಿಲ್ಲೆಗಳಲ್ಲಿ ಕರ್ಫ್ಯೂ ಮಾದರಿ ನಿರ್ಬಂಧ । ಮನೆಯಿಂದ ವಿನಾಕಾರಣ ಹೊರಹೋದರೆ ಕೇಸು !
ದಕ್ಷಿಣ ಕನ್ನಡ ಸೇರಿ 9 ಜಿಲ್ಲೆಗಳಲ್ಲಿ ಕರ್ಫ್ಯೂ ಮಾದರಿ ನಿರ್ಬಂಧ ವಿಧಿಸಲಾಗಿದೆ. ಜನರು ಮನೆಯಿಂದ ಹೊರಬರುವಂತಿಲ್ಲ. ಸುಮ್ಮನೆ ಹೊರಬಂದರೆ ಕೇಸು ಬೀಳುತ್ತದೆ-ಐ ಪಿ ಸಿ ಸೆಕ್ಷನ್ 270 ಜಾರಿ – ಎರಡು ವರ್ಷ ಜೈಲು ಊಟ ಪಕ್ಕಾ. ಈಗಾಗಲೇ ದಾರಿ ಮದ್ಯ ಇರುವವರು, ಊರಿಗೆ ಹೋರಾಡುವವರು ಬೇಗ ಮನೆ ಸೇರಿಕೊಳ್ಳಲು ಸೂಚನೆ. ಬಹುಶ: ನಾಳೆ 6 ಗಂಟೆಯಿಂದ ಈ ಆದೇಶ ಜಾರಿಯಾಗುತ್ತದೆ. ಅಷ್ಟರೊಳಗೆ ಮನೆಗೆ ಸೇರಿದರೆ ದೇಶವೇ ಸೇಫ್.
ನಿನ್ನೆ ರಾಜ್ಯ ಸರಕಾರ ಕೊರೊನಾ ವೈರಸ್ ಸಿಂಕಿತರು ದೃಢಪಟ್ಟಿರುವ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಗಳೂರು, ಬೆಳಗಾವಿ, ಮೈಸೂರು, ಧಾರವಾಡ, ಚಿಕ್ಕಬಳ್ಳಾಪುರ, ಕಲಬುರಗಿ, ಕೊಡಗು ಸೇರಿದಂತೆ 9 ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿತ್ತು. ಈಗ ಮತ್ತಷ್ಟು ಕಠಿಣ ನಿರ್ಧಾರ ಹೊರ ಬಂದಿದೆ. ಯಾಕೆಂದರೆ, ಜನರು ಮಾತು ಕೇಳುತ್ತಿಲ್ಲ. ಜನ ವಿನಾಕಾರಣ ಬೀದಿ ಸುತ್ತುತ್ತಿದ್ದಾರೆ. ಟೀ ಶಾಪ್ ಅಲ್ಲಿ ಇಲ್ಲಿ ತಿರುಗುತ್ತಿದ್ದಾರೆ.
ಆದರೆ ಹಾಲು, ತರಕಾರಿ, ಅಗತ್ಯ ಔಷಧ ವೈದ್ಯಕೀಯ ಸೇವೆ ಮಾತ್ರ ಲಭ್ಯ. ಇವನ್ನು ಕೊಳ್ಳಲು ಹೊರಬರಬಹುದು. ಯಾವುದೇ ಸರಕಾರೀ ಮತ್ತು ಪ್ರೈವೇಟ್ ವಾಹನ ಸಂಚಾರ ಇರುವುದಿಲ್ಲ.