ಕೊರೊನಾ ಭೀತಿ | ಸಿಎಂ ತುರ್ತು ಸಭೆ | ತೆಗೆದುಕೊಂಡ ಪ್ರಮುಖ ನಿರ್ಧಾರಗಳು
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ತುರ್ತು ಸಭೆ ನಡೆಸಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು
1. ಮುಂದಿನ ಆದೇಶದವರೆಗೆ ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಮುಂದೂಡಿಕೆ.
2. ನಾಳೆ, ಮಾರ್ಚ್ 23ಕ್ಕೆ ನಡೆಯಬೇಕಿರುವ ಪಿಯುಸಿಯ ಇಂಗ್ಲಿಷ್ ಪರೀಕ್ಷೆ ಎಂದಿನಂತೆ ನಡೆಯಲಿದೆ.
3. ರಾಜ್ಯದ ಎಲ್ಲಾ ಗಡಿ ಭಾಗಗಳನ್ನು ಬಂದ್ ಮಾಡಲು ತೀರ್ಮಾನ.
4. 1700 ಹಾಸಿಗೆಯ ವಿಕ್ಟೋರಿಯಾ ಆಸ್ಪತ್ರೆಯನ್ನು #ಕೋವಿಡ್_19 ಚಿಕಿತ್ಸೆಗೆ ಮಾತ್ರ ಪರಿವರ್ತಿಸಲು ತೀರ್ಮಾನ.
5. ಐಸಿಎಂಆರ್ ಮತ್ತು ಎನ್ಐವಿ ಸಹಕಾರದೊಂದಿಗೆ ಸರ್ಕಾರಿ ಮತ್ತು ಸರ್ಕಾರೇತರ ಆಸ್ಪತ್ರೆಗಳಿಗೂ #ಕೋವಿಡ್_19 ತಪಾಸಣೆಗೆ ಪರವಾನಿಗೆ ಕೊಡಿಸಲು ಕ್ರಮ.
6. ಲ್ಯಾಬ್ ಟೆಸ್ಟ್ ಗಳ ಪ್ರಮಾಣ ಹೆಚ್ಚಿಸಲು ಕ್ರಮ.
7. ಸ್ಥಳೀಯ ವಿಮಾನ ಪ್ರಯಾಣಿಕರಿಗೂ ತಪಾಸಣೆ ಕಡ್ಡಾಯಗೊಳ್ಳಲು ತೀರ್ಮಾನ
8. ಎಲ್ಲಾ ಚುನಾವಣೆಗಳ ಮುಂದೂಡಿಕೆ
9. ಬಾಲಬ್ರೂಯಿ ಅತಿಥಿ ಗೃಹ #ಕೊರೊನ ವಾರ್ ರೂಂ ಆಗಿ ಪರಿವರ್ತನೆ.
10. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಕಾರ್ಯಗಳು ನಡೆಯಲಿವೆ.
11. ಎರಡು ತಿಂಗಳ ಪಡಿತರ ಒದಗಿಸಲು ಕ್ರಮ.
12. ಮುಂದಿನ 15 ದಿನ ನಗರದಿಂದ ಯಾರೂ ಹಳ್ಳಿಗಳಿಗೆ ಹೋಗದಂತೆ ಮುಖ್ಯಮಂತ್ರಿಗಳ ಮನವಿ.
13. ಜೀವನಾವಶ್ಯಕ ವಸ್ತುಗಳ ಕೊರತೆಯಾಗದಂತೆ ಕ್ರಮ.
ಸಭೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥ್ ನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹಾಗೂ ಖ್ಯಾತ ವೈದ್ಯ ಡಾ. ದೇವಿ ಶೆಟ್ಟಿ, ಉನ್ನತ ಅಧಿಕಾರಿಗಳು ಹಾಜರಿದ್ದರು.