ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ‘ ಯಶಸ್ ‘ ವಿದ್ಯಾರ್ಥಿಗಳಿಂದ ಕೃಷಿ ತೋಟಕ್ಕೆ ಭೇಟಿ

ಪುಣಚ : ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಯಾದ ವಿವೇಕಾನಂದ ಅಧ್ಯಯನ ಕೇಂದ್ರ ‘ ಯಶಸ್‍ ‘ ಇದರ ವಿದ್ಯಾರ್ಥಿಗಳಿಗೆ ಬಾಳೆ ಕೃಷಿ ಮತ್ತು ತೋಟಗಾರಿಕೆಯಲ್ಲಿರುವ ಲಾಭ-ನಷ್ಟ, ಸೌಲಭ್ಯ- ಸಮಸ್ಯೆಗಳ ಕುರಿತಾದ ಪ್ರಾತ್ಯಕ್ಷಿಕೆ ಅಧ್ಯಯನಕ್ಕಾಗಿ ಪುಣಚದ ರಾಜೇಶ್‍ ಅವರ ತೋಟಕ್ಕೆ ಭೇಟಿ ನೀಡಲಾಯಿತು. ನಾಗರಿಕ ಸೇವೆಯ ಗುರಿಯನ್ನು ಹೊಂದಿರುವ ವಿದ್ಯಾರ್ಥಿಗಳಲ್ಲಿ ಕೃಷಿಯ ಕುರಿತು ಮಾಹಿತಿಯನ್ನು ನೀಡುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


Ad Widget

ವಿದ್ಯಾರ್ಥಿ ಸಮೂಹಕ್ಕೆ ಕೃಷಿ ಕಡೆಗಿನ ಒಲವು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕೆ ನೀಡಬಲ್ಲ ಲಾಭ ಮತ್ತು ಅದಕ್ಕಾಗಿ ವಹಿಸಬೇಕಾದ ಶ್ರಮದ ಕುರಿತು ಪುಣಚದ ರಾಜೇಶ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಅಷ್ಟೇ ಅಲ್ಲದೇ ಕೃಷಿಯಲ್ಲಿ ತೊಡಗಿಸಿಕೊಂಡಾಗ ಬಂಡವಾಳ ಹೂಡುವ ಮೊದಲು ವಹಿಸಬೇಕಾದ ಜಾಗರೂಕತೆ, ಮಾಡಬೇಕಾದ ಯೋಜನೆಗಳ ಕುರಿತು ಹೇಗೆ ಗಮನವಹಿಸಬೇಕು.ಒಂದು ಪ್ರತ್ಯೇಕ ಕೃಷಿಯ ಆರಂಭದಿಂದ, ಅದರ ಮುಕ್ತಾಯದವರೆಗೆ ಎದುರಾಗಬಹುದಾದ ಸಮಸ್ಯೆಗಳ ಕುರಿತು ಮೊದಲೇ ಎಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿಸಿದರು.


Ad Widget

ಈ ಸಂದರ್ಭದಲ್ಲಿ ವಿವೇಕಾನಂದ ಯಶಸ್‍ ಅಧ್ಯಯನ ಕೇಂದ್ರದ ಸಂಯೋಜಕ ಗೋವಿಂದರಾಜ ಶರ್ಮ, ಯಶಸ್‍ನ ಮೊದಲ ಮೂರು ಬ್ಯಾಚ್‍ನ ನಲವತ್ತು ಮಂದಿ ವಿದ್ಯಾರ್ಥಿಗಳು, ವಿವೇಕಾನಂದ ಹಾಸ್ಟೆಲ್ಸ್‍ನ ಮುಖ್ಯ ನಿಲಯ ಪಾಲಕ ಹರೇಕೃಷ್ಣ, ವಿವೇಕಾನಂದ ಕಾಲೇಜಿನ ಎಸ್ಟೇಟ್ ಮ್ಯಾನೇಜರ್ ಲಕ್ಷ್ಮೀ ಪ್ರಸಾದ್, ವಿದ್ಯಾರ್ಥಿನಿ ನಿಲಯ ಪಾಲಕರು ಉಪಸ್ಥಿತರಿದ್ದರು.


Ad Widget
error: Content is protected !!
Scroll to Top
%d bloggers like this: