ಕಡಬ ಪಿಜಕ್ಕಳ | ಇನ್ಫೋಸಿಸ್ ಉದ್ಯೋಗಿಯಾಗಿದ್ದ ಕಲ್ಲರ್ಪೆಯ ವೀಕ್ಷಿತಾ ನಿಧನ

Share the Article

ಕಡಬ : ಇಲ್ಲಿನ ಪಿಜಕ್ಕಳ ಕಲ್ಲರ್ಪೆ ನಿವಾಸಿ ನಿವೃತ್ತ ಬ್ಯಾಂಕ್ ಉದ್ಯೋಗಿ ಪುಟ್ಟಣ್ಣ ಗೌಡರ ಪುತ್ರಿ ವೀಕ್ಷಿತಾ (27ವ) ಅವರು ಅಸೌಖ್ಯದಿಂದ ಮಾ.20 ರಂದು ಸ್ವಗೃಹದಲ್ಲಿ ನಿಧನರಾದರು.

ವೀಕ್ಷಿತಾ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದರು. ಬಳಿಕ ಇನ್ಫೋಸಿಸ್ ನಲ್ಲಿ ಉದ್ಯೋಗಿಯಾಗಿದ್ದರು. ಎರಡು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಈಕೆ ವಾಪಸು ಬಂದು ಮನೆಯಲ್ಲಿದ್ದು ,ಇಲ್ಲಿಯೇ ಚಿಕಿತ್ಸೆ ಪಡೆಯುತಿದ್ದರು.

ಮೃತರು ತಾಯಿ ಯಶೋಧಾ, ಸಹೋದರಿಯರಾದ ಅಕ್ಷತಾ, ರಕ್ಷಿತಾ ಅವರನ್ನು ಅಗಲಿದ್ದಾರೆ.

Leave A Reply

Your email address will not be published.