ದ.ಕ-ಉಡುಪಿ : ಆಂಗ್ಲ ಮಾಧ್ಯಮ ಒಕ್ಕೂಟದಿಂದ ಮುಖ್ಯಮಂತ್ರಿಗಳಿಗೆ ಮನವಿ
ಸವಣೂರು : ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನಿಯೋಗ ಬೆಂಗಳೂರಿನ ವಿಧಾನ ಸೌಧದ ಮುಖ್ಯಮಂತ್ರಿಗಳ ಕಛೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೇಟಿ ಮಾಡಿ ಮಾನ್ಯತೆ ನವೀಕರಿಸುವ ಸಂದರ್ಭದಲ್ಲಿ ಇಲಾಖೆ ಸೂಚಿಸುವ ನಿರ್ದೇಶನಗಳನ್ನು ಸರಳೀಕರಿಸುವಂತೆ ಮನವಿ ಮಾಡಲಾಯಿತು.
ಮಂಗಳೂರು ಮತ್ತು ಉಡುಪಿಯಲ್ಲಿ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ರೀತಿಯ ಗುಣಮಟ್ಟದ ಶಿಕ್ಷಣ ವನ್ನು ನೀಡುತ್ತಿದ್ದು, ಆದರೆ ಸರಕಾರ ಮತ್ತು ಶಿಕ್ಷಣ ಇಲಾಖೆ ನೀಡುತ್ತಿರುವ ಆದೇಶದಿಂದ ನಮಗೆ ಶಾಲೆಗಳನ್ನು ನಡೆಸಲು ತೊಂದರೆಯಾಗುತ್ತಿದೆ.
ಮಾನ್ಯತೆ ನವೀಕರಣ ಸಂದರ್ಭದಲ್ಲಿ ಇಲಾಖೆ ಸೂಚಿಸುವ ನಯಮಗಳನ್ನು ಸರಳಗೊಳಿಸಬೇಕು,ಪ್ರಸಕ್ತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಶಿಕ್ಷಕರು, ಶಿಕ್ಷಕೇತರ ಸಿಬಂದಿಗಳೂ ವೇತನ ಪರಿಷ್ಕರಣೆಯ ಆದೇಶದಂತೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಹೆತ್ತವರು ಹೆಚ್ಚು ಶುಲ್ಕವನ್ನು ಪಾವತಿಸ ಬೇಕಾಗುತ್ತದೆ. ಆದರಿಂದ ಸದರಿ ಆದೇಶವನ್ನು ಮರುಪರಿಶೀಲಿಸಿ ನ್ಯಾಯಯುತವಾದ ಆದೇಶವನ್ನು ಹೊರಡಿಸುವಂತೆ ವಿನಂತಿಸಲಾಯಿತು.ಜತೆಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಖಾಸಗಿ ಆಂಗ್ಲ ಮಾದ್ಯಮ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನೂ ಮುಖ್ಯಮಂತ್ರಿಯವರಲ್ಲಿ ಮನವರಿಕೆ ಮಾಡಲಾಯಿತು.
ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ವೈ ಮಹಮ್ಮದ್ ಬ್ಯಾರಿ ಎಡಪದವು, ಕಾರ್ಯದರ್ಶಿ ರವೀಂದ್ರ ಶೆಟ್ಟಿ ಉಳಿದೊಟ್ಟು, ಕೋಶಾಧಿಕಾರಿ ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ, ಜತೆ ಕಾರ್ಯದರ್ಶಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಒಕ್ಕೂಟದ ಪದಾಽಕಾರಿಗಳಾದ ದಿನಕರ ಉಳ್ಳಾಲ್, ಬಿ.ಎ.ನಝೀರ್, ಮೂಸಬ್ಬ ಪಿ.ಬ್ಯಾರಿ, ಇಕ್ಬಾಲ್ ಶೇಖ್ ರಹಮತ್ತುಲ್ಲ, ಅಶ್ವಿನ್ ಎಲ್ ಶೆಟ್ಟಿ ಮೊದಲಾದವರಿದ್ದರು.