ಕೊರೋನಾ ।। ಇಟಲಿಯಲ್ಲಿ ಅಟ್ಟಹಾಸ, ಭಾರತದಲ್ಲಿ ಏನಾಗಬಹುದು? । ಒಳಗಿದೆ ಗ್ರಾಫಿಕಲ್ ರಿಪೋರ್ಟ್

ಇಟಲಿಯಲ್ಲಿ ಬುಧವಾರ 475, ಗುರುವಾರ 427 ಮತ್ತು ಶುಕ್ರವಾರ 627 ಜನರು ಕರೋನಾದ ಕರಾಳ ಅಟ್ಟಹಾಸ ಮೆರೆದಿದೆ. ನಿನ್ನೆ ಚೀನಾದಲ್ಲಿ ಒಂದೇ 39 ಹೊಸ ಕೇಸುಗಳ ಪತ್ತೆ. ಚೀನಾದಲ್ಲಿ ಪರಿಸ್ಥಿತಿ ಪೂರ್ತಿ ಕಂಟ್ರೋಲ್ ನಲ್ಲಿದೆ.


Ad Widget

Ad Widget

ಮೂರು ದಿನಗಳಲ್ಲಿ ಇಟಲಿಯಲ್ಲಿ ಒಟ್ಟು 1529 ಸಾವುಗಳು ! ನಿನ್ನೆ ಒಂದು ದಿನ 15,147 ಹೊಸ ಪ್ರಕರಣಗಳು ! ಮನು ಕುಲ, ಇಷ್ಟು ವೈಜ್ಞಾನಿಕ ಪ್ರಗತಿಯ ನಂತರ ಕೂಡಾ ತಲ್ಲಣ. ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಇಟಲಿ ಸಂಪೂರ್ಣ ವಿಫಲವಾಗಿದೆ. ವಿಶ್ವ ಸಮುದಾಯ ಕೂಡ ಅದಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಸಿದ್ಧವಾಗಿಲ್ಲ.


Ad Widget

ಭಾರತದಲ್ಲಿ ಕೂಡ ಒಟ್ಟು 249 ರಷ್ಟು ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇಲ್ಲಿಯತನಕ 4 ಸಾವು ಭಾರತದಲ್ಲಿ ಆಗಿದೆ. ಭಾರತದಲ್ಲಿ ಸೋಂಕಿತ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಅಂಕಿ ಅಂಶದಿಂದ ನಾವು ಗಾಬರಿ ಆಗಬೇಕಾಗಿಲ್ಲ. ಆದರೆ ಮತ್ತಷ್ಟು ಜಾಗ್ರತೆ ವಹಿಸಿ ಪರಸ್ಪರ ಮಿನಿಮಲ್ ಕಾಂಟ್ಯಾಕ್ಟ್ ನಿಂದ ಇರುವುದು ಜರೂರು.

ಕಾರಣ ಏನೆಂದರೆ, ಏರುತ್ತಿರುವ ಅಂಕೆ ಸಂಖ್ಯೆ ಯನ್ನು ಎರಡು ರೀತಿಯಾಗಿ ನಾವು ವಿಶ್ಲೇಷಿಸಬಹುದು. ಮೊದಲನೆಯದಾಗಿ, ದಿನ ನಿತ್ಯ ಜಾಸ್ತಿ ರೋಗಿಗಳು ಸಿಕ್ಕಿದರು ಅಂದರೆ ಹೆಚ್ಚು ಹೆಚ್ಚು ಸೋಂಕು ತಗಲುತ್ತಿದೆ. ರೋಗ ನಮ್ಮ ಕಂಟ್ರೋಲ್ ನಲ್ಲಿ ಇಲ್ಲ, ದಿನೇ ದಿನೇ ನಾವು ಮತ್ತಷ್ಟು ಸೋಂಕಿಗೆ ಒಳಗಾಗುತ್ತಿದ್ದೇವೆ ಅಂದುಕೊಳ್ಳಬಹುದು. ಇದು ನಿಜಕ್ಕೂ ಗಾಬರಿ ಪಡುವಂತಹ ವಿಚಾರ.

Ad Widget

Ad Widget

Ad Widget

ಆದರೆ, ಸೋಂಕಿತರ ಸಂಖ್ಯೆಯಲ್ಲಿ ಜಾಸ್ತಿ ರಿಪೋರ್ಟ್ ಆದ ಕೂಡಲೇ ಅದರಿಂದ ಹೊಸ ಸೊಂಕೀತರು ಆಗುತ್ತಿದ್ದಾರೆಯೇ ಎಂದು ಈಗಲೇ ಹೇಳಲಾಗುವುದಿಲ್ಲ. ಕಳೆದೆರಡು ವಾರಗಳಿಂದ ಎಚ್ಚೆತ್ತುಕೊಂಡಿರುವ ಜನತೆ ಮತ್ತು ಸರಕಾರ, ಈಗಾಗಲೇ ಸೋಂಕಿತರಾಗಿರುವ ಜನರನ್ನು ಮಾಡಿ ಪತ್ತೆ ಮಾಡಿ ಅವರನ್ನು ಉಳಿದ ಜನರಿಂದ ಪ್ರತ್ಯೇಕಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದು ಕೂಡಾ ನಾವು ವಿಶ್ಲೇಷಿಸಬಹುದು.
ಇವೆರಡರಲ್ಲಿ ಯಾವುದು ಆಗುತ್ತಿದೆ ಎಂದು ಈಗಲೇ ಹೇಳುವುದಕ್ಕೆ ಆಗುವುದಿಲ್ಲ. ಇನ್ನೊಂದು 4- 5 ದಿನ ನಾವು ಕಾಯಬೇಕು.

ಕಳೆದ ಐದಾರು ದಿನಗಳಿಂದಷ್ಟೇ ಜನರು ಮತ್ತು ಸರಕಾರ ಮೈ ಕೊಡವಿಕೊಂಡು ಎದ್ದು ಕುಳಿತದ್ದು. ಮಾರ್ಚ್ 15 ನೇ ತಾರೀಕಿನ ನಂತರ ದಿನೇ ದಿನೇ ಹದಿನೈದು-ಇಪ್ಪತ್ತು ಹೀಗೆ ಸೋಂಕಿತರ ಸಂಖ್ಯ ಜಾಸ್ತಿಯಾಗುತ್ತಾ, ಮೊನ್ನೆ 30 ಜನ ಹೊಸ ಸೋಂಕಿತರು ಪತ್ತೆಯಾಗಿದ್ದರು. ನಿನ್ನೆಯಂತೂ ಒಟ್ಟು 50 ಜನ ಸಿಕ್ಕಿಬಿದ್ದಿದ್ದರು.

ಇನ್ನೆರಡು ದಿನ ಇದು ಇದೇ ಟ್ರೆಂಡ್ ನಲ್ಲಿ ಹೋಗಬಹುದು. ಆದರೆ ಎಲ್ಲೋ, 300 ರ ಗಡಿಯಲ್ಲಿ ನಿಂತು ಏರುತ್ತಿರುವ ಗ್ರಾಫ್ ತಲೆ ಬಗ್ಗಿಸಿ ಬಗ್ಗಿಸಿ ಸಪಾಟಾಗಬೇಕು. ಮಂಗಳವಾರಕ್ಕೆ ನಾವು ಆ ಟ್ರೆಂಡ್ ಅನ್ನು ನಿರೀಕ್ಷಿಸಬಹುದು. ಗ್ರಾಫ್ ಗಮನಿಸಿ : ಮಾರ್ಚ್ 15 ರ ನಂತರ ಏಕಾಏಕಿ ಏರಿದ ಗ್ರಾಫ್ ಗೆ ಕಾರಣ ಸರಕಾರದ ಹೆಚ್ಚಿದ ಪ್ರಯತ್ನದಿಂದ ಒಮ್ಮೆಲೇ ಹೊಸ ಕೇಸುಗಳ ಅನಾವರಣ.

ಇನ್ನೊಂದು ವಾರದಲ್ಲಿ ಏರುತ್ತಿರುವ ಸಂಖ್ಯೆ ಹೊಸ ಸೋಂಕಿತರ ಸಂಖ್ಯೆ 20-30 ರ ಗಡಿಯಲ್ಲಿ ನಿಂತು ಆ ನಂತರ ಗ್ರಾಫ್ ಸಡನ್ ಆಗಿ ಕೆಳಗೆ ಬೀಳಬೇಕು. ಅದನ್ನು ನಾವೆಲ್ಲರೂ ನಿರೀಕ್ಷಿಸುತ್ತಿರುವುದು.

ಇಲ್ಲಿ ಜಾಗ್ರತೆ ಒಂದೇ ಇರುವುದು ಪರಿಹಾರ. ಆದಷ್ಟು ಮನೆಯಲ್ಲಿಯೇ ಇರಿ. ಅಷ್ಟೊಂದು ಅವಶ್ಯಕತೆ ಇಲ್ಲದೆ ಮನೆಯಿಂದ ಹೊರ ಬರಬೇಡಿ.
ನಾಳೆ ನಿಯತ್ತಾಗಿ ಜನತಾ ಕರ್ಪ್ಯೂ ಆಚರಿಸೋಣ. ಒಂದು ದಿನ ಮಾತ್ರ ಅಲ್ಲ, ರೋಗ ನಿರ್ಮೂಲನೆ ಆಗೋವರೆಗೂ ಜನತಾ ಕರ್ಫ್ಯೂ ಆದಷ್ಟು ಪಾಲಿಸೋಣ. ರಾಜಕೀಯ, ತಮಾಷೆ, ಟ್ರೊಲ್ ಎಂದಿನಂತೆ ಸಾಂಗವಾಗಿ ಸಾಗಲಿ : ಮೂಗು ಬಾಯಿ ಮುಚ್ಚಿಕೊಂಡು ಸ್ವಯಂಘೋಷಿತ ಕರ್ಫ್ಯೂ ಮನಸ್ಸಿನಲ್ಲಿಟ್ಟುಕೊಂಡು ಮುಂದುವರಿಯಿರಿ.

error: Content is protected !!
Scroll to Top
%d bloggers like this: