ಮುಕ್ಕೂರು | ಕೊರೊನಾ ವಿರುದ್ದ ಮುನ್ನೆಚ್ಚರಿಕೆ ಕರಪತ್ರ ಬಿಡುಗಡೆ

Share the Article

ಮುಕ್ಕೂರು : ಕುಂಡಡ್ಕ- ಮುಕ್ಕೂರು ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ ಕೊರೊನಾ ವೈರಸ್ ತಡೆಗಟ್ಟುವ ಕುರಿತು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗೆಗಿನ ಜಾಗೃತಿ ಕರಪತ್ರ ಬಿಡುಗಡೆ ಮಾ.18 ರಂದು ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಕಚೇರಿ ಮುಂಭಾಗ ನಡೆಯಿತು.

ಕರಪತ್ರ ಬಿಡುಗಡೆಗೊಳಿಸಿದ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ರೋಗ ಬಾರದ ಹಾಗೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ನಾವೆಲ್ಲರೂ ಗಮನ ಹರಿಸಬೇಕು.ಈ ನಿಟ್ಟಿನಲ್ಲಿ ಕರಪತ್ರದಲ್ಲಿನ ಮಾಹಿತಿ ಪ್ರಯೋಜನಕಾರಿ ಎಂದರು.

ಪೆರುವಾಜೆ ಗ್ರಾ.ಪಂ.ಸದಸ್ಯ ಉಮೇಶ್ ಕೆಎಂಬಿ ಮಾತನಾಡಿ, ‌ಅನಗತ್ಯ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಕರಪತ್ರದ ಮೂಲಕ ಮನೆ ಮನೆಗೆ ಮಾಹಿತಿ ನೀಡುವ ಪ್ರಯತ್ನ ಉತ್ತಮವಾದದು.ಇದರ ಮಾಹಿತಿ ಪಡೆದು ಮುನ್ನೆಚ್ಚರಿಕೆಗೆ ಗಮನ ಹರಿಸೋಣ ಎಂದರು.

ಈ ಸಂದರ್ಭದಲ್ಲಿ ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ಪೂವಪ್ಪ ಪೂಜಾರಿ ಮುಕ್ಕೂರು, ದಯಾನಂದ ರೈ ಕನ್ನೆಜಾಲು, ಜಯಂತ ಕುಂಡಡ್ಕ, ಸುಜಾತ ವಿ ರಾಜ್, ನಾರಾಯಣ ಗೌಡ ಅಡ್ಯತಕಂಡ, ಪ್ರದೀಪ್ ಬೈಲಂಗಡಿ, ಹೊನ್ನಪ್ಪ, ಲಿಂಗಪ್ಪ ಗೌಡ ಕುಂಡಡ್ಕ, ರೂಪಾನಂದ ಬೀರುಸಾಗು, ವಿಜಯ ರೈ ಕನ್ನೆಜಾಲು, ಅನಿಕೇತನ್ ಚಾಮುಂಡಿಮೂಲೆ, ಪವನ್, ಮಹಮ್ಮದ್ ಕುಂಡಡ್ಕ, ರಾಮಚಂದ್ರ ಚೆನ್ನಾವರ, ಸರಿತಾ, ಲಲಿತಾ ಬಿ ಮೊದಲಾದವರಿದ್ದರು. ನೇಸರ ಯುವಕ ಮಂಡಲದ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್. ನಿರೂಪಿಸಿದರು.

Leave A Reply

Your email address will not be published.