ಈ ಕೋರೋನಾ ಪೀಡಿತ ವ್ಯಕ್ತಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಹಾದು ಹೋಗಿದ್ದ | ನಾವೆಷ್ಟು ಸೇಫ್ ?!
ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕೇರಳಕ್ಕೆ ತೆರಳಿದ್ದ ವ್ಯಕ್ತಿಗೆ ಕರೋನಾ ಸೋಂಕು ಇರುವುದು ಪಟ್ಟಿದೆ ಎಂದು ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದುಬೈನಿಂದ ಹೊರಟ ಈ ಈ ವ್ಯಕ್ತಿ ಮಾರ್ಚ್ 14 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದರು. ಆನಂತರ ಅಲ್ಲಿಂದ ಕಾಸರಗೋಡಿನ ಬದಿಯಡ್ಕದ ಆತನ ಮನೆ ನೀರ್ಚಾಲು ಸೇರಿಕೊಂಡಿದ್ದರು. ಆನಂತರ ರೋಗ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಈಗ ಕಾಸರಗೋಡಿನ ಈ ವ್ಯಕ್ತಿಗೆ ಕರೋನಾ ವೈರಸ್ ಸೋಂಕು ತಗಲಿದ ಕಾರಣದಿಂದ ದುಬೈನಿಂದ ಮಂಗಳೂರಿಗೆ ಈತನ ಜೊತೆ ಪ್ರಯಾಣಿಸಿದ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಪ್ರಶ್ನೆ ಎದ್ದಿದೆ. ಈಗ ಈತನ ಜೊತೆ ಪ್ರಯಾಣಿಸಿದ ಮತ್ತು ವಿಮಾನ ನಿಲ್ದಾಣದಲ್ಲಿ ಈ ವ್ಯಕ್ತಿಯ ಸಂಪರ್ಕಕ್ಕೆ ಬಂದ ಎಲ್ಲರ ಟ್ರೆಸಿಂಗ್ ಮಾಡುವುದು ಮತ್ತವರ ಆರೋಗ್ಯ ತಪಾಸಣೆ ಮಾಡುವ ಅನಿವಾರ್ಯತೆ ಇದೆ.
ಈ ವ್ಯಕ್ತಿಯಲ್ಲಿ ಕೊರೋನಾ ವೈರಾಣು ಪತ್ತೆಯಾಗಿ 18 ತಾಸು ಕಳೆದು ಹೋದರೂ ದಕ್ಷಿಣಕನ್ನಡದ ಆಡಳಿತ ವ್ಯವಸ್ಥೆ ಇನ್ನೂ ಎಚ್ಚೆತ್ತುಕೊಂಡಿಲ್ಲ. ಸಹಪ್ರಯಾಣಿಕರ ಪತ್ತೆಗೆ ಮತ್ತು ಆರೋಗ್ಯ ತಪಾಸಣೆಗೆ ಇವಾಗ ಹೊರಡುತ್ತಿದೆ.
ಇಂದು ಬೆಳಿಗ್ಗೆ ತಾನೇ ಉಮ್ರಾ ಯಾತ್ರೆ ಮುಗಿಸಿ ಮೆಕ್ಕಾದಿಂದ ಬಂದಿದ್ದ ಬೆಳ್ತಂಗಡಿಯ ಕರಾಯದ ಹಿರಿಯ ವ್ಯಕ್ತಿಯೊಬ್ಬರಿಗೆ ಕೋರೋನಾ ಸೋಂಕು ತಗಲಿದ ಪುಕಾರು ಹಬ್ಬಿತ್ತು. ಆನಂತರ ಆತನಲ್ಲಿ ಕರೋನದ ಸೋಂಕು ಇಲ್ಲ ರಿಪೋರ್ಟ್ ನೆಗೆಟಿವ್ ಬಂದಿದೆ ಎಂಬ ಹೇಳಿಕೆ ಬೆಳ್ತಂಗಡಿಯ ಆರೋಗ್ಯಾಧಿಕಾರಿಯಿಂದ ಬಂದಿತ್ತು.
ಈಗ ದಕ್ಷಿಣ ಕನ್ನಡದ ಎಲ್ಲರ ಮನದಲ್ಲಿ ಇರುವುದು ಒಂದೇ ಪ್ರಶ್ನೆ : ನಾವೆಷ್ಟು ಸೇಫ್ ?!