ಹಯಾತುಲ್ ಅವುಲಿಯಾ ದರ್ಗಾ ಶರಿಫ್ ತುರ್ಕಳಿಕೆ ಇಂದಿನಿಂದ ಉರೂಸ್ ಪ್ರಾರಂಭ
ಮಾ.11 : ಜಾತಿ ಮತ ಬೇದವಿಲ್ಲದೆ ಹಲವು ಭಕ್ತಾಭಿಮಾನಿಗಳ ಕೇಂದ್ರವಾಗಿ ಪ್ರಖ್ಯಾತಿ ಹೊಂದಿದ ತುರ್ಕಳಿಕೆ ಉರೂಸ್ ಕಾರ್ಯಕ್ರಮಕ್ಕೆ ಸಾವಿರಾರು ಸಂದರ್ಶಕರು, ಭಕ್ತಾದಿಗಳು ಭಾಗವಹಿಸುತ್ತಿದ್ದಾರೆ.
ವರ್ಷಂಪ್ರತಿ ಆಚರಿಕೊಂಡು ಬರುವ ಉರೂಸ್ ಸಮಾರಂಭ ಇದೇ ಬರುವ ದಿನಾಂಕ 15-03-2020 ಅದಿತ್ಯವಾರ ಸಂಜೆ 6 ಗಂಟೆಗೆ ತುರ್ಕಳಿಕೆ ದರ್ಗಾ ವಠಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಅಸಯ್ಯಿದ್ ಫಝಲ್ ಕೋಯಮ್ಮ ಕೂರತ್ ಇವರ ಘನ ಅದ್ಯಕ್ಷತೆಯಲ್ಲಿ ಎವಿಜ್ರಂಭನೆಯಿಂದ ನಡೆಯಲಿದೆ. ಎಂದು ಕಾರ್ಯಕ್ರಮದ ಅದ್ಯಕ್ಷರಾದ ಮುಹಮ್ಮದ್ ಅಲಿ ಕರಾಯ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಉರೂಸ್ ಪ್ರಯುಕ್ತ ನಡೆಸಿಕೊಂಡು ಬರುವ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಇಂದಿನಿಂದ ಪ್ರಾರಂಭಗೋಳ್ಳಲಿದ್ದು, ದಿನಾಂಕ 11,12,13,14 ರಂದು ಉಪನ್ಯಾಸ ನಡೆಯಲಿದೆ, ದಿನಾಂಕ 15 ರಂದು ಆದಿತ್ಯವಾರ ಸಮಾರೋಪ ಸಮಾರಂಭ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ, ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ.
ನಮ್ಮ ಫೇಸ್ ಬುಕ್ ಪೇಜ್ ಗೆ ನಿಮಗಿದೋ ಆಹ್ವಾನ. ಇಲ್ಲಿ ಕ್ಲಿಕ್ ಮಾಡಿ
ಸಯ್ಯಿದ್ ಸಾದಾತ್ ತಂಙಳ್, ಅಸ್ಸಯ್ಯಿದ್ ಇಸ್ಮಾಯಿಲ್ ಬುಖಾರಿ ಆದರೆ, ಅಸಯ್ಯಿದ್ ಮುಹ್ಸಿನ್ ತಂಙಳ್ ಕಲ್ಲೇರಿ, ಜಬ್ಬಾರ್ ಸಖಾಫಿ ಪಾತೂರು, ಕಬೀರ್ ಹಿಮಮಿ, ಸಯ್ಯಿದ್ ಜುನೈದ್ ತಂಙಳ್ ಕೇರಳ, ನೌಫಲ್ ಸಖಾಪಿ ಕಳಸ, ಮೌಲಾನ ಶಾಫಿ ಸಹದಿ ಮುಂತಾದ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ, ಸ್ಥಳಿಯ ಅಂಗ ಸಂಸ್ಥೆಗಳಾದ ಎಸ್ ವೈ ಎಸ್ ಮತ್ತು ಎಸ್ ಎಸ್ ಎಪ್ ಸಂಘಟನೆಗಳು ಪ್ರಚಾರ ನಿರ್ವಹಣೆ ವಹಿಸಿಕೊಂಡಿದ್ದು, ವಿವಿಧ ಕಡೆಗಳಿಂದ ಸಾವಿರಾರು ಸಾರ್ವಜನಿಕ ಸಂದರ್ಶಕರು ಅಗಮಿಸಲಿದ್ದು, ಐತಿಹಾಸಿಕವಾಗಿ ಸಮಾಪ್ತಿಗೊಳ್ಳಲಿದೆ ಎಂದು ಹೆಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾದ್ಯಕ್ಷರಾದ ಪಿಎಸ್ ಇಬ್ರಾಹಿಂ ಮದನಿ, ಪ್ರದಾನ ಕಾರ್ಯದರ್ಶಿ ಹಂಝ ಪಿ.ಟಿ, ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ, ಎಸ್‍ವೈಎಸ್ ಮೂರುಗೋಳಿ ಸೆಂಟರ್ ಅದ್ಯಕ್ಷರಾದ ಹೈದರ್ ಹಾಜಿ ಬದ್ಯಾರ್ ಉಪಸ್ಥಿತರಿದ್ದರು.
ಚೀನಾದಿಂದ ನೇರ ಕಡಬದಿಂದ ವ್ಯಕ್ತಿ । ಕಡಬ ಪರಿಸರದಲ್ಲಿ ರೋಗ ಭಯ