ಪುತ್ತೂರು : ಬಾಲವನದಲ್ಲಿ `ಕಾರಂತ ಬಾಲವನ ನಾಟಕೋತ್ಸವ ‘ ಮಾರ್ಚ್ 18 ರಿಂದ 22 ವರೆಗೆ

ಪುತ್ತೂರು : ಡಾ.ಶಿವರಾಮ ಕಾರಂತ ಅವರ ಕರ್ಮಭೂಮಿಯಾಗಿರುವ ಪುತ್ತೂರಿನ ಪರ್ಲಡ್ಕದ ಬಾಲವನದಲ್ಲಿ ಮಾರ್ಚ್ 18ರಿಂದ 22 ವರೆಗೆ ಡಾ. ಶಿವರಾಮ ಕಾರಂತ ಬಾಲವನ ನಾಟಕೋತ್ಸವ' ನಡೆಯಲಿದೆ ಎಂದು ಬಾಲವನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, 5 ದಿನಗಳ ಕಾಲ ನಡೆಯುವ ಈ ನಾಟಕೋತ್ಸವದಲ್ಲಿ ಶಿವಮೊಗ್ಗ ರಂಗಾಯಣ, ಅರೆಭಾಷೆ ಅಕಾಡೆಮಿ ಹಾಗೂ ಮೈಸೂರು ರಂಗಾಯಣ ತಂಡಗಳ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಪ್ರತಿದಿನ ಸಂಜೆ 7 ಗಂಟೆಗೆ ನಾಟಕಗಳು ಪ್ರಾರಂಭಗೊಳ್ಳಲಿವೆ. ಮಾರ್ಚ್ 18ರಂದು ಸಂಜೆ 6.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ನಾಟಕೋತ್ಸವವನ್ನು ನೀನಾಸಂ ಹೆಗ್ಗೋಡು ಸಂಸ್ಥೆಯ ಪ್ರಾಂಶುಪಾಲ ಡಾ.ವೆಂಕಟ್ರಮಣ ಐತಾಳ್ ಉದ್ಘಾಟಿಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ, ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ ಮತ್ತಿತರರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪುತ್ತೂರಿನ ಹಿರಿಯ ಪತ್ರಕರ್ತ ಬಿ.ಟಿ.ರಂಜನ್ ಹಾಗೂ ರಂಗಕಲಾವಿದ ಜೀವನ್‍ರಾಮ್ ಸುಳ್ಯ ಅವರನ್ನು ಸನ್ಮಾನಿಸಲಾಗುವುದು.

ಬಿ.ಟಿ.ರಂಜನ್
ಜೀವನ್ ರಾಂ ಸುಳ್ಯ

ಸಂಜೆ 7 ಗಂಟೆಗೆ ಅರೆಭಾಷೆ ಅಕಾಡೆಮಿ ವತಿಯಿಂದ ಜೀವನ್‍ರಾಮ್ ಸುಳ್ಯ ನಿರ್ದೇಶನದಸಾಹೇಬ್ರು ಬಂದವೇ..’ ನಾಟಕ ನಡೆಯಲಿದೆ. ಮಾರ್ಚ್ 19ರಂದು ಶಿವಮೊಗ್ಗ ರಂಗಾಯಣದ ಗಣೇಶ್ ಮಂದಾರ್ತಿ ಹಾಗೂ ಶ್ರವಣ್ ಹೆಗ್ಗೋಡು ನಿರ್ದೇಶನದ ಹಕ್ಕಿಗೊಂದು ಗೂಡು ಕೊಡಿ', ಮಾರ್ಚ್ 20ರಂದು ಚಂದ್ರಹಾಸನ್ ಕೇರಳ ಅವರ ನಿರ್ದೇಶನದಅರ್ಕೇಡಿಯದಲ್ಲಿ ಪಕ್’ , ಮಾರ್ಚ್ 21ರಂದು ಶ್ರವಣ್ ಹೆಗ್ಗೋಡು ನಿರ್ದೇಶನದ `ರೆಕ್ಸ್ ಅವರ್ಸ್-ಡೈನೊ ಏಕಾಂಗಿ ಪಯಣ’ ಮಾರ್ಚ್ 22ರಂದು ಚಿದಂಬರ ರಾವ್ ಜಂಬೆ ನಿರ್ದೇಶನದ ಬೆಂದಕಾಳು ಆನ್ ಮೋಸ್ಟ್’ ಮೈಸೂರು ರಂಗಾಯಣದ ಈ ಮೂರು ನಾಟಕಗಳು ಪ್ರದರ್ಶನಗೊಳ್ಳಲಿವೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ತಿಳಿಸಿದರು.

Leave A Reply

Your email address will not be published.